Home ಅಪರಾಧ ಗದಗ: 3 ದಿನದ ಹಸುಗೂಸು ಎಪಿಎಂಸಿ ಆವರಣದಲ್ಲಿ ಪತ್ತೆ

ಗದಗ: 3 ದಿನದ ಹಸುಗೂಸು ಎಪಿಎಂಸಿ ಆವರಣದಲ್ಲಿ ಪತ್ತೆ

0

ಗದಗ: ಮೂರು ದಿನದ ಗಂಡು ಹಸುಗೂಸನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಳಚೆ ಜಾಗದಲ್ಲಿ ಇಟ್ಟು ಹೋದ ಘಟನೆ ಗದಗದಲ್ಲಿ ನಡೆದಿದೆ. ಮಗುವಿನ ಚಿರಾಟದ ಸದ್ದು ಕೇಳಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದು ನೋಡಿದಾಗ ರಟ್ಟಿನ ಡಬ್ಬದಲ್ಲಿ ಮುದ್ದಾದ ಗಂಡುಮಗು ಇರುವುದು ಗೊತ್ತಾಗಿದೆ. ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಮಗು ರಕ್ಷಣೆ ಮಾಡಿದ್ದಾರೆ. ಎಪಿಎಂಸಿ ಆವರಣದಲ್ಲಿ ಹಂದಿಗಳು ಹೆಚ್ಚಿರುವುದರಿಂದ ಸ್ವಲ್ಪ ವಿಳಂಬವಾಗಿದ್ದರೂ ಹಂದಿ, ನಾಯಿಗಳ ಪಾಲಾಗುತ್ತಿದ್ದ ಮಗು. ಯುವಕನ ಸಮಯ ಪ್ರಜ್ಞೆ, ಪೊಲೀಸರ ಸಹಾಯದಿಂದ ಮಗು ಮರುಜನ್ಮ ಪಡೆದಿದೆ. ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version