Home ನಮ್ಮ ಜಿಲ್ಲೆ ಧಾರವಾಡ ಗಡಿ ವಿವಾದ: ಅನಗತ್ಯ ಹೇಳಿಕೆಗಳು ಬೇಡ: ಪ್ರಲ್ಹಾದ ಜೋಶಿ

ಗಡಿ ವಿವಾದ: ಅನಗತ್ಯ ಹೇಳಿಕೆಗಳು ಬೇಡ: ಪ್ರಲ್ಹಾದ ಜೋಶಿ

0

ಧಾರವಾಡ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಕುರಿತು ಪ್ರಧಾನಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆಯಿಲ್ಲ. ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಹೊಂದಾಣಿಕೆಯಿಂದಿದ್ದಾರೆ. ಸೊಲ್ಲಾಪುರ, ಸಾಂಗ್ಲಿ, ಕೊಲ್ಹಾಪುರದಲ್ಲಿ ಕನ್ನಡಿಗರು ನೆಮ್ಮದಿಯಿಂದ ಇದ್ದಾರೆ. ವಿವಾದಾತ್ಮಕ ಹೇಳಿಕೆ ನೀಡದಂತೆ ಮಹಾರಾಷ್ಟ್ರದ ನಮ್ಮ ಪಕ್ಷದ ಶಾಸಕರಿಗೆ ಹೇಳಿದ್ದೇನೆ. ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳ ಸರಕಾರಗಳೊಂದಿಗೆ ಮಾತನಾಡಬೇಕು ಎಂದರು.
ದೇಶವಾಸಿಗಳೆಲ್ಲ ಒಗ್ಗಟ್ಟಾಗಿರಬೇಕು. ಚೀನಾ, ಪಾಕಿಸ್ತಾನದೊಂದಿಗೆ ಹೋರಾಡಬೇಕು. ರಾಜ್ಯಗಳ ಮಧ್ಯೆ ಜಗಳ ಮಾಡುವುದು ದೌರ್ಭಾಗ್ಯದ ಸಂಗತಿ. ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡೂ ರಾಜ್ಯಗಳಿಗೆ ನ್ಯಾಯೋಚಿತ ತೀರ್ಪು ಬರುವ ನಿರೀಕ್ಷೆಯಿದೆ. ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ, ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಬಾರದು. ಇದರಿಂದ ಯಾರಿಗೂ ಲಾಭವಿಲ್ಲ ಎಂದು ತಿಳಿಸಿದರು.

ಗಡಿ ವಿವಾದ    ಅನಗತ್ಯ ಹೇಳಿಕೆಗಳು ಬೇಡ   ಪ್ರಲ್ಹಾದ ಜೋಶಿ

Exit mobile version