Home ತಾಜಾ ಸುದ್ದಿ ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ?

ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ?

0

ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಶಾಸಕರನ್ನ ಕರ್ಕೊಂಡು ಮಜಾ ಮಾಡುವಾಗ ಸಿ.ಟಿ ರವಿಯವರಿಗೆ ಏನಾಗಿತ್ತು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸಿಟಿ ರವಿ ಹಿರಿಯರಿದ್ದಾರೆ, ಅವರ ರಾಜಕಾರಣ ಅವರು ಮಾಡಲಿ. ನಿಮಗೆ ಬರೋ ಬೆದರಿಕೆ ತರ, ಬೇರೆಯವರಿಗೂ ಬರುತ್ತೆ. ಕಾಂಗ್ರೆಸ್‌ಗೆ ಬನ್ನಿ ಎಂದು ನಾವು ಯಾರನ್ನೂ ಕರೀತಿಲ್ಲ. ನಮಗೆ ಇರೋ ನಂಬರ್‌ಗೆ ಯಾರೂ ಅವಶ್ಯಕತೆ ಇಲ್ಲ. ಆದ್ರೆ ಪಕ್ಷಕ್ಕೆ ಬರೋರನ್ನ ನಾನು ತಡೆಯೋಕೆ ಆಗುತ್ತಾ? ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗುತ್ತಾ? ಎಂದು ಟಾಂಗ್ ಕೊಟ್ಟಿದ್ದಾರೆ.

Exit mobile version