Home ಅಪರಾಧ ಕೊನೆಗೂ ಆರ್‌.ಡಿ. ಪಾಟೀಲ್ ಬಂಧನ

ಕೊನೆಗೂ ಆರ್‌.ಡಿ. ಪಾಟೀಲ್ ಬಂಧನ

0

ಕಲಬುರಗಿ: ಕೆಇಎ ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ ಕೊನೆಗೂ ಬಂಧನವಾಗಿದೆ. ಮಹಾರಾಷ್ಟ್ರದ ಸೋಲಾಪುರ ಬಳಿ ಆರ್‌.ಡಿ. ಪಾಟೀಲ್ ಅವರನ್ನು ಕಲಬುರಗಿ ನಗರ ವಿಶೇಷ ಪೊಲೀಸ್ ತಂಡ ಬಂಧಿಸಿದ್ದು, ಆರ್‌ಡಿಪಿಯನ್ನು ಬಂಧಿಸಿ ಕಲಬುರಗಿಗೆ ಪೊಲೀಸರು ಕರೆತರುತ್ತಿದ್ದಾರೆ. ಕಳೆದ ೧೨ ದಿನಗಳಿಂದ ತಲೆಮರೆಸಿಕೊಂಡಿದ್ದ ಕೆಇಎ ಪರೀಕ್ಷಾ ಹಗರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ಕಳೆದ ನ. ೬ರಂದು ಕಲಬುರಗಿ ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮೀ ಅಪಾರ್ಟ್ಮೆಂಟ್‌ನಿಂದ ಎಸ್ಕೆಪ್ ಆಗಿದ್ದ. ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಈ ಬಗ್ಗೆ ಮೊದಲೇ ಬಂಧನ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿ ವಿಸೃತ್ತ ವರದಿ ಪ್ರಸಾರ ಮಾಡಲಾಗಿತ್ತು. ಈಗ ಪೊಲೀಸ್ ಆಯುಕ್ತ ಚೇತನ್ ಅವರು ಬಂಧನ ಬಗ್ಗೆ ಖಚಿತಪಡಿಸಲಿದ್ದಾರೆ.

Exit mobile version