ಹುಬ್ಬಳ್ಳಿ: ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಕುಂದಗೋಳ ಪಟ್ಟಣದಲ್ಲಿ ನಡೆಸುಚ ರೋಡ್ ಶೋ ಕ್ಷಣಗಣನೆ ಆರಂಭವಾಗಿದೆ. ಧಾರವಾಡದಿಂದ ಅ್ವಲ್ಪ ಹೊತ್ತಿನಲ್ಲಿಯೇ ಪಟ್ಟಣಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿದ್ದಾರೆ. ಪೂರ್ವ ನಿರ್ಧರಿತ ಕಾರ್ಯಕ್ರಮ ಪಟ್ಟಿ ಬದಲಾಗಿದೆ. ಪಟ್ಟಣದ ಐತಿಹಾಸಿಕ ದೇವಸ್ಥಾನಕ್ಕೆ, ಕಲ್ಯಾಣಪುರ ಅಜ್ಜನವರ ಮಠಕ್ಕೆ ಭೇಟಿ ನೀಡುವವರಿದ್ದರು. ಆದರೆ, ಈ ಭೇಟಿ ರದ್ದಾಗಿವೆ.
ಕೇವಲ ಪಟ್ಟಣದ ಗಾಳಿ ಮರಿಯಮ್ಮ ದೇವಸ್ಥಾನದಿಂದ ಮೂರಂಗಡಿ ಕ್ರಾಸ್‌ವರೆಗೆ ಒಂದುವರೆ ಕಿ ಮೀ ರೋಡ್ ಶೋ ನಡೆಸುವರು. ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕೆಲಸಗಳ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುವರು. ಗೋಡೆಗಳ ಮೇಲೆ ಬಣ್ಣ ಬಳಿಯುವರು ( ವಾಲ್ ಪೇಂಟಿಂಗ್) ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಚುನಾವಣಾ ಚಾಣಕ್ಯನ ಸ್ವಾಗತಕ್ಕೆ ಬಿಜೆಪಿ ಕಾರ್ತಕರ್ತರು, ಮುಖಂಡರು, ಸಾರ್ವಜನಿಕರು ಕಾದು ನಿಂತಿದ್ದಾರೆ.