Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಮಲಾಪುರ ಮೃಗಾಲಯದಲ್ಲಿದ್ದ ದಾಂಡೇಲಿಯ ಹೆಣ್ಣು ಹುಲಿ ಆರೋಗ್ಯದಲ್ಲಿ ಸುಧಾರಣೆ

ಕಮಲಾಪುರ ಮೃಗಾಲಯದಲ್ಲಿದ್ದ ದಾಂಡೇಲಿಯ ಹೆಣ್ಣು ಹುಲಿ ಆರೋಗ್ಯದಲ್ಲಿ ಸುಧಾರಣೆ

0

ಹೊಸಪೇಟೆ: ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ಕಳೆದ ಒಂದು ವಾರದಿಂದ ಆರೈಕೆಯಲ್ಲಿದ್ದ ದಾಂಡೇಲಿಯ ಹೆಣ್ಣು ಹುಲಿ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್ ಎಂ. ತಿಳಿಸಿದ್ದಾರೆ.
ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಿತ್ರಾಣಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದ ಅರಣ್ಯ ಅಧಿಕಾರಿಗಳು ಆರೈಕೆಗಾಗಿ ಡಿ. 19 ರಂದು ಹಂಪಿ ಮೃಗಾಲಯಕ್ಕೆ ಸ್ಥಳಾಂತರಿಸಿದ್ದರು. ಮೃಗಾಲಯದ ಆಸ್ಪತ್ರೆಯಲ್ಲಿ ಡಾ. ವಾಣಿ ಅವರು ನೀಡಿದ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಒದಗಿಸಿದ್ದರಿಂದ ಬಹುಬೇಗ ಹುಲಿ ಚೇತರಿಸಿಕೊಂಡಿದೆ. ದಿನವಿಡೀ ಚಟುವಟಿಕೆಯಿಂದ ಕೂಡಿರುತ್ತದೆ. ಇಲಾಖೆಯ ಮೇಲಾಧಿಕಾರಿಗಳ ಆದೇಶದ ಮೇರೆಗೆ ಹುಲಿಯನ್ನು ಪುನಃ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಮೃಗಾಲಯದ ಅಧಿಕಾರಿ ಕಿರಣ್ ಅವರು ತಿಳಿಸಿದ್ದಾರೆ.

Exit mobile version