Home ನಮ್ಮ ಜಿಲ್ಲೆ ಏಕ್ ಚತ್ ಡಾವ್: ಪಾಲಿಂಧರ್‌ನನ್ನು ಮಣಿಸಿದ ಕಿರಣ

ಏಕ್ ಚತ್ ಡಾವ್: ಪಾಲಿಂಧರ್‌ನನ್ನು ಮಣಿಸಿದ ಕಿರಣ

0

ರಬಕವಿ-ಬನಹಟ್ಟಿ: ಕೇವಲ ೧೦ ನಿಮಿಷದ ಸಮಯದೊಂದಿಗೆ ಭಾರಿ ಕುಸ್ತಿ ಸುಮಾರು ೪೦ ಸಾವಿರ ಪ್ರೇಕ್ಷಕರನ್ನು ರಂಜಿಸುವಲ್ಲಿ ಕಾರಣವಾಗಿ ಕೊನೆಗೂ ಮಹಾರಾಷ್ಟ್ರ ಕೇಸರಿ ಪುಣೆಯ ಕಿರಣ ಪೈಲ್ವಾನ್ ಭಗತ್ ಅವರು ಹಿಮಾಚಲ ಪ್ರದೇಶದ ಭಾರತ ಕೇಸರಿ ಪಾಲಿಂಧರ್ ಪೈಲ್ವಾನ್ ಮಥುರಾರನ್ನು ಏಕ್ ಚತ್ ಡಾವ್ ಮೂಲಕ ಗೆಲುವು ಸಾಧಿಸಿ, ಬೆಳ್ಳಿ ಗದೆ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮದಗಜಗಳಂತೆ ಹೋರಾಟ ನಡೆಸಿದ ಕುಸ್ತಿ ಪಟುಗಳು ಜನರ ಪ್ರೋತ್ಸಾಹಕ್ಕೆ, ಸಿಳ್ಳೆಯ ನಿನಾದಕ್ಕೆ ತಲೆದೂಗಿದರು. ಕುಸ್ತಿ ಗೆಲ್ಲಲು ನಡೆಸಿದ ವಿರೋಚಿತ ಹೋರಾಟ ಕುಸ್ತಿ ರಸಿಕರ ಮನ ತಣಿಸಿತು. ಪ್ರಥಮ ಸ್ಥಾನ ಕುಸ್ತಿಗೆ ೨ ಲಕ್ಷ, ದ್ವಿತೀಯ ಸ್ಥಾನಕ್ಕೆ ೧ ಲಕ್ಷ ಹಾಗೂ ಮೂರನೇಯ ಸ್ಥಾನದ ಕುಸ್ತಿ ಪಟುಗಳಿಗೆ ೭೫ ಸಾವಿರ ಸೇರಿದಂತೆ ಅನೇಕ ಕುಸ್ತಿಗಳಿಗೆ ವಿಶೇಷ ಬಹುಮಾನ ನೀಡುವ ಮೂಲಕ ಪ್ರಮುಖ ಮೂರು ಕುಸ್ತಿಗಳಲ್ಲಿ ಗೆದ್ದ ಕುಸ್ತಿ ಪಟುಗಳಿಗೆ ಬೆಳ್ಳಿ ಗದೆಗಳನ್ನು ನೀಡಲಾಯಿತು.

Exit mobile version