Home ತಾಜಾ ಸುದ್ದಿ ಎಕ್ಸಿಟ್ ಪೋಲ್, ಜನ ಗೊಂದಲದಲ್ಲಿ

ಎಕ್ಸಿಟ್ ಪೋಲ್, ಜನ ಗೊಂದಲದಲ್ಲಿ

0

ಚಿಕ್ಕೋಡಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಆಗಲಿದೆ ಎಂಬ ಸುಳಿವನ್ನೂ ನೀಡಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮತ ಹಾಕಿಯಾಗಿದೆ. ಜನರೇ ಈ ವಿಚಾರದಲ್ಲಿ ಗೊಂದಲ್ಲಿದ್ದಾರೆ. ಫಲಿತಾಂಶಕ್ಕೆ ತುಂಬಾ ಸಮಯ ಉಳಿದಿಲ್ಲ. ಎಲ್ಲರೂ ಕಾದು ನೋಡೋಣ, ಅನಗತ್ಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ಕೆಲವು ಚಾನಲ್‌ನವರು ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಚಾನಲ್‌ಗಳು ಕಾಂಗ್ರೆಸ್‌ಗೆ ಗೆಲುವು ಸಿಗಲಿದೆ ಎಂದು ಸಮೀಕ್ಷೆ ಮಾಡಿವೆ. ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪರ ಒಲವಿದೆ. ಇನ್ನೇನು ಫಲಿತಾಂಶಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿವೆ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವುದು ನಾಳೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದರು.

Exit mobile version