Home ತಾಜಾ ಸುದ್ದಿ ʻಮಗುವಿಗೂ ಗೊತ್ತಿದೆ, ರಾಹುಲ್ ಗಾಂಧಿಗೆ ಗೊತ್ತಿಲ್ಲʼ

ʻಮಗುವಿಗೂ ಗೊತ್ತಿದೆ, ರಾಹುಲ್ ಗಾಂಧಿಗೆ ಗೊತ್ತಿಲ್ಲʼ

0
arun singh

ಪಕ್ಷವನ್ನು ಒಂದೇ ಕುಟುಂಬ ನಡೆಸುವಂತದ್ದು ಕುಟುಂಬ ರಾಜಕಾರಣ. ಒಂದೇ ಕುಟುಂಬದಲ್ಲಿದ್ದರು ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದವರನ್ನ, ಯೋಗ್ಯರಾದವರನ್ನ ಪಕ್ಷ ಟಿಕೆಟ್ ನೀಡಲು ಪರಿಗಣನೆ ಮಾಡುತ್ತದೆ. ಚುನಾವಣೆ ಘೋಷಣೆ ಬಳಿಕ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಡೆಯುವ ಕೆಲಸ ಮಾಡಿದೆ. ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿಲ್ಲ, ರಾಹುಲ್‌ಗಾಂಧಿ ಇತಿಹಾಸ ಓದಿ ತಿಳಿದುಕೊಳ್ಳಬೇಕಿತ್ತು. ಆರಂಭದಿಂದಲು ಭಾರತ ಒಂದಾಗಿದೆ. ಐದನೇ ತರಗತಿಯ ಮಗುವಿಗೂ ಗೊತ್ತಿದೆ, ದೇಶ ಒಂದಾಗಿದೆ ಅಂತಾ, ರಾಹುಲ್ ಗಾಂಧಿಗೆ ಗೊತ್ತಿಲ್ಲ ಅಂದ್ರೆ ನಾವೇನು ಹೇಳಲು ಸಾಧ್ಯ ಎಂದು ವ್ಯಂಗ್ಯವಾಡಿದರು.

Exit mobile version