Vice President Election: ಉಪರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ ಪ್ರಕಟ

0
134

ನವದೆಹಲಿ; ಕೇಂದ್ರ ಚುನಾವಣಾ ಆಯೋಗ ಭಾರತದ ಉಪರಾಷ್ಟ್ರಪತಿ ಆಯ್ಕೆಗಾಗಿ ನಡೆಸುವ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದೆ. ಜಗದೀಪ್ ಧನಕರ್ ರಾಜೀನಾಮೆ ಬಳಿಕ ಉಪರಾಷ್ಟ್ರಪತಿ ಹುದ್ದೆ ತೆರವಾಗಿದೆ. ಲೋಕಸಭೆ, ರಾಜ್ಯಸಭೆಯ ಸದಸ್ಯರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

ಚುನಾವಣಾ ಆಯೋಗದ ಅಧಿಸೂಚನೆ ಪ್ರಕಾರ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಆಗಸ್ಟ್ 21 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.

ಚುನಾವಣಾ ವೇಳಾಪಟ್ಟಿ

  • ಚುನಾವಣಾ ಆಯೋಗ ಆಗಸ್ಟ್ 7ರ ಗುರುವಾರ ಉಪ ರಾಷ್ಟ್ರಪತಿ ಚುನಾವಣಾ ಅಧಿಸೂಚನೆ ಪ್ರಕಟಿಸಲಿದೆ.
  • ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಲು 21 ಆಗಸ್ಟ್ ಗುರುವಾರ ಕೊನೆಯ ದಿನ
  • ಆಗಸ್ಟ್ 22ರ ಶುಕ್ರವಾರ ನಾಮಪತ್ರಗಳನ್ನು ಪರಿಶೀಲನೆ ಮಾಡಲಾಗುತ್ತದೆ
  • ಆಗಸ್ಟ್ 25ರ ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
  • ಮತದಾನ ಅಗತ್ಯವಿದ್ದರೆ ಸೆಪ್ಟೆಂಬರ್ 9ರ ಮಂಗಳವಾರ ನಡೆಯಲಿದೆ
  • ಸೆಪ್ಟೆಂಬರ್ 9ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಮತದಾನ
  • ಮತದಾನ ಪೂರ್ಣಗೊಂಡ ಬಳಿಕ ಸೆಪ್ಟೆಂಬರ್ 9ರಂದು ಮತ ಎಣಿಕೆ ಮಾಡಿ, ಫಲಿತಾಂಶ ಘೋಷಣೆ ಮಾಡಲಾಗುತ್ತದೆ.

ಭಾರತದ ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಜುಲೈ 21ರಂದು ಆರೋಗ್ಯದ ಕಾರಣವನ್ನು ನೀಡಿ ದಿಢೀರ್ ರಾಜೀನಾಮೆ ನೀಡಿದ್ದರು. ಜುಲೈ 22ರಂದು ರಾಷ್ಟ್ರಪತಿಗಳು ರಾಜೀನಾಮೆ ಅಂಗೀಕರಿಸಿದ್ದರು.

ಉಪರಾಷ್ಟ್ರಪತಿಗಳ ಅಧಿಕಾರಾವಧಿ ಇನ್ನೂ 2 ವರ್ಷವಿತ್ತು. ತೆರವಾದ ಹುದ್ದೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತಯಾರಿ ಆರಂಭಿಸಿತ್ತು. ಗುರುವಾರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಆಯೋಗ ಹೇಳಿತ್ತು.

ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಸಂಸದರ ಸದಸ್ಯ ಬಲದ ಮೇಲೆ ಎನ್‌ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಜಯಗಳಿಸುವುದು ಸ್ಪಷ್ಟವಾಗಿದೆ. ಆದ್ದರಿಂದ ಅಭ್ಯರ್ಥ ಯಾರು? ಎಂಬದು ಕುತೂಹಲಕ್ಕೆ ಕಾರಣವಾಗಿದೆ.

ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಸಂಸದರ ಸದಸ್ಯ ಬಲದ ಮೇಲೆ ಎನ್‌ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಜಯಗಳಿಸುವುದು ಸ್ಪಷ್ಟವಾಗಿದೆ. ಆದ್ದರಿಂದ ಅಭ್ಯರ್ಥ ಯಾರು? ಎಂಬದು ಕುತೂಹಲಕ್ಕೆ ಕಾರಣವಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸೇರಿದಂತೆ ಹಲವು ನಾಯಕರ ಹೆಸರು ಉಪರಾಷ್ಟ್ರಪತಿ ಅಭ್ಯರ್ಥಿ ಹುದ್ದೆಗೆ ಕೇಳಿ ಬರುತ್ತಿದೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಯಾವ ಅಭ್ಯರ್ಥಿ ಬೆಂಬಿಸಲಿದ್ದಾರೆ? ಎಂದು ಚರ್ಚೆಗಳು ಸಾಗಿವೆ.

‘ಇಂಡಿಯಾ’ ಮೈತ್ರಿಕೂಟ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಅವಿರೋಧವಾಗಿ ಉಪರಾಷ್ಟ್ರಪತಿ ಆಯ್ಕೆ ನಡೆಯಲಿದೆ. ಲೋಕಸಭೆ ವಿರೋಧ ಪಕ್ಷವಾದ ಕಾಂಗ್ರೆಸ್ ಯಾವ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್ ಸಹ ಚುನಾವಣೆಗೆ ಯಾರು ಅಭ್ಯರ್ಥಿ? ಎಂದು ಇನ್ನೂ ತೀರ್ಮಾನ ಮಾಡಿಲ್ಲ.

Previous articleಜನವೋ ಜನ, ಹೌಸ್ ಫುಲ್: ಗೆದ್ದ Su From So, ರಿಪೋರ್ಟ್ ಕಾರ್ಡ್ ಕೊಟ್ಟ ಶೆಟ್ಟರು!
Next articlePrajwal Revanna: ಅತ್ಯಾಚಾರ ಪ್ರಕರಣ, ಪ್ರಜ್ವಲ್ ರೇವಣ್ಣ ದೋಷಿ

LEAVE A REPLY

Please enter your comment!
Please enter your name here