Home News ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಪ್ರದೇಶದ ಹಲವಡೆ ಭೂಕಂಪನವಾಗಿದೆ.
ಬೆಳಗಿನ ಜಾವ ಸಂಭವಿಸಿದ ಈ ಭೂಕಂಪನವು 4.4 ತೀವ್ರತೆಯಿಂದ ಕೂಡಿತ್ತು, ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್, ಜಿಂದ್, ರೋಹ್ಟಕ್, ಭಿವಾನಿ, ಝಜ್ಜರ್, ಬಹದ್ದೂರ್‌ಗಢ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಝಜ್ಜರ್‌ನಿಂದ ಉತ್ತರಕ್ಕೆ 10 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ಎಂದು ಅಳೆಯಲಾಗಿದೆ. ಭೂಕಂಪದ ಕೇಂದ್ರಬಿಂದು ಹರ್ಯಾಣ. ಎರಡು ನಿಮಿಷಗಳಲ್ಲಿ ಝಜ್ಜರ್‌ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಬೆಳಗ್ಗೆ 9.07 ಕ್ಕೆ ಝಜ್ಜರ್‌ನಲ್ಲಿ ಮೊದಲ ಭೂಕಂಪ ಸಂಭವಿಸಿದೆ. ನಂತರ ಬೆಳಗ್ಗೆ 9.10 ಕ್ಕೆ ಸೌಮ್ಯ ಭೂಕಂಪ ಸಂಭವಿಸಿದೆ. ಹಠಾತ್ ಕಂಪನದಿಂದಾಗಿ ಜನರು ಭಯಭೀತರಾಗಿದ್ದರು. ದ ಝಜ್ಜರ್‌ನಲ್ಲಿದೆ ಎಂದು ಹೇಳಲಾಗಿದೆ.
ಭೂಕಂಪದ ಸಮಯದಲ್ಲಿ ಜನರು ಕೆಲಸದಲ್ಲಿ ನಿರತರಾಗಿದ್ದರು.. ಭೂಮಿ ಕಂಪಿಸಲು ಪ್ರಾರಂಭವಾದ ತಕ್ಷಣ, ವಸ್ತುಗಳು ನಡುಗಲು ಪ್ರಾರಂಭಿಸಿದವು. ಈ ಕಂಪನಗಳು ಸಾಕಷ್ಟು ಬಲವಾಗಿದ್ದು, ಭೂಕಂಪನದ ಅನುಭವವಾದ ತಕ್ಷಣ, ಅನೇಕ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳು ಮತ್ತು ಕಟ್ಟಡಗಳಿಂದ ಹೊರಗೆ ಓಡಿಹೋದರು. ಆದರೆ ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

Exit mobile version