Home ನಮ್ಮ ಜಿಲ್ಲೆ ಕೊಪ್ಪಳ ಹಣದಾಸೆಗೆ ಹೂಡಿಕೆ ಮಾಡಿಸಿದ್ದ ಶಿಕ್ಷಕ ಆತ್ಮಹತ್ಯೆ

ಹಣದಾಸೆಗೆ ಹೂಡಿಕೆ ಮಾಡಿಸಿದ್ದ ಶಿಕ್ಷಕ ಆತ್ಮಹತ್ಯೆ

0

ಕೊಪ್ಪಳ: ಹಣ ಡಬಲ್‌ ಮಾಡುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಖಾಸಗಿ ಶಾಲೆ ಶಿಕ್ಷಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಬಸವೇಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ರಾಜು ಬ್ಯಾಡಗಿ(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಶಾಲೆಯಲ್ಲಿ ಕಡಿಮೆ ವೇತನ ಇದ್ದುದರಿಂದ ಕುಟುಂಬ ನಿರ್ವಹಣೆ ಹಾಗೂ ಇತರೆ ಖರ್ಚುಗಳಿಗಾಗಿ ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದರು. ಆಗ ಹಣ ಡಬ್ಲಿಂಗ್‌ ಮಾಡುವುದಾಗಿ ಪರಿಚಿತವಾದ ಎಂಬಿಬಿ ಕಂಪನಿಗೆ ಮೊದಲು ತಮ್ಮ ದುಡಿದ ಹಣವನ್ನು ಹೂಡಿಕೆ ಮಾಡಿದ್ದಾರೆ. ಈ ವೇಳೆ ಕೆಲವೊಂದಿಷ್ಟು ಕಮಿಷನ್‌ ಕೂಡ ಕೊಡಲಾಗಿದೆ. ಬಳಿಕ ಇದನ್ನೇ ನಂಬಿ ಇತರರಿಗೂ ಹೇಳಿ ಪರಿಚಯಸ್ಥರಿಂದ ಹೆಚ್ಚಿನ ಹಣ ಹೂಡಿಕೆ ಮಾಡಿಸಿದ್ದಾರೆ. ಹೀಗೆ ಗ್ರಾಮದ ನೂರಾರು ಜನರಿಂದ ಎಂಬಿಬಿ ಕಂಪನಿಗೆ ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ಮೊದಲು ಕಮೀಷನ್‌ ಕೊಟ್ಟ ಕಂಪನಿ ಇದ್ದಕ್ಕಿಂದತೆ ನಾಪತ್ತೆಯಾಗಿದೆ. ಇದರಿಂದ ಮೋಸಕ್ಕೆ ಹೋಗಿರುವುದು ತಿಳಿದು ಶಿಕ್ಷಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋವೊಂದನ್ನು ಮಾಡಿ ಎಲ್ಲರಿಗೂ ಕ್ಷಮೆಯಾಚಿಸಿರುವ ಶಿಕ್ಷಕ ಬಳಿಕ ಕ್ರಿಮಿನಾಶಕ ಸೇವಿಸುವುದನ್ನು ವಿಡಿಯೋ ಮಾಡಿದ್ದಾರೆ. ಜಮೀನಿಗೆ ಸಿಂಪಡಿಸುವ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Exit mobile version