Home ತಾಜಾ ಸುದ್ದಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಯುಕ್ತ ಕರ್ನಾಟಕಕ್ಕೆ ಮುಂಚೂಣಿ ಸ್ಥಾನ

ಸ್ವಾತಂತ್ರ್ಯ ಹೋರಾಟದಲ್ಲಿ ಸಂಯುಕ್ತ ಕರ್ನಾಟಕಕ್ಕೆ ಮುಂಚೂಣಿ ಸ್ಥಾನ

0

ಸಂಡೂರು: ಲೋಕ ಶಿಕ್ಷಣ ಟ್ರಸ್ಟ್‌ನ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿದ್ಯಾರ್ಥಿ ಆವೃತ್ತಿ ಜಾಣರ ಗುರು ಪತ್ರಿಕೆಯ ವಿತರಣೆ ಕಾರ್ಯಕ್ರಮ ಸಂಡೂರು ಪಟ್ಟಣದ ಶ್ರೀಶೈಲ ವಿದ್ಯಾ ಕೇಂದ್ರದ ವಿಷ್ಣುಪಂತ ನಾನವಟೆ ಪದವಿ ಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿಗಳಿಗೆ ಜಾಣರ ಗುರು ಪತ್ರಿಕೆ ವಿತರಿಸಿ ಮಾತನಾಡಿದ ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ್ ಹೆಗಡೆ, ಸಂಯುಕ್ತ ಕರ್ನಾಟಕ ಬೆಳಗಾವಿಯಲ್ಲಿ ಹುಟ್ಟಿ ಹುಬ್ಬಳ್ಳಿಗೆ ಬಂದು ರಾಜ್ಯದಲ್ಲಿ ಮಾತ್ರ ಅಲ್ಲದೆ ನೆರೆ ರಾಜ್ಯಕ್ಕೂ ಪಸರಿಸಿದ ಪತ್ರಿಕೆ ಸಂಯುಕ್ತ ಕರ್ನಾಟಕ.
ಸಂಯುಕ್ತ ಕರ್ನಾಟಕ ಇತಿಹಾಸ ಅಂದರೆ ಸ್ವತಂತ್ರ ಹೋರಾಟ, ರಾಜ್ಯದ ಏಕೀಕರಣ, ರಾಜ್ಯದ ಅಭಿವೃದ್ಧಿ ಇತಿಹಾಸ ಆಗಿದೆ ಎಂದರು. ದೇಶದಲ್ಲೂ ಸಾರ್ವಜನಿಕ ಮಾಲಿಕತ್ವದ ಪತ್ರಿಕೆ ಇದ್ದರೆ ಅದು ನಮ್ಮ ಸಂಯುಕ್ತ ಕರ್ನಾಟಕ ಮಾತ್ರ. ನಮ್ಮದೇ ಸಂಸ್ಥೆಯ ಕರ್ಮವೀರ 103 ವರ್ಷ ಇತಿಹಾಸ ಹೊಂದಿದೆ. ಸ್ವತಂತ್ರ ಪೂರ್ವದ ಇತಿಹಾಸ ಅಂದರೆ ದೇಶ ಪ್ರೇಮ, ರಾಷ್ಟ್ರೀಯತೆ ಬಿತ್ತುವ ಪತ್ರಿಕೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಮಹತ್ತರ ಪಾತ್ರ ವಹಿಸಿತ್ತು ಎಂದು ಅವರು ತಿಳಿಸಿದರು.
ಇಲ್ಲಿನ ಎಂ.ವೈ.ಘೋರ್ಪಡೆ ಅವರು ಪತ್ರಿಕೆ ಬಗ್ಗೆ ಹೊಂದಿದ್ದ ಕಾಳಜಿಯನ್ನು ಸ್ಮರಿಸಿದರು. ಪತ್ರಿಕೆಯ ಹಿರಿಯ ಓದುಗ ಡಾ. ಸಿ.ಎ. ಗೋಪಾಲ ಮಾತನಾಡಿದರು. ಶ್ರೀಶೈಲ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಚಿದಂಬರ ಎಂ. ನಾನಾವಟೆ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ವಿಭಾಗದ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಪ್ರಸಾರಾಂಗ ವಿಭಾಗದ ಮುಖ್ಯಸ್ಥ ಶಾಮ್‌ರಾವ್ ಕುಲಕರ್ಣಿ, ಜಾಹೀರಾತು ವಿಭಾಗದ ಮುಖ್ಯಸ್ಥ ವಿಘ್ನೇಶ್ ಭಟ್, ಜಿಲ್ಲಾ ವರದಿಗಾರ ವೀರನಗೌಡ ಪಾಟೀಲ್ ವೇದಿಕೆಯಲ್ಲಿದ್ದರು.

Exit mobile version