Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಸಚಿವ ಕೆಎಚ್ ಮುನಿಯಪ್ಪ ತೋಟದ ಕಾರ್ಮಿಕ ಸಾವು

ಸಚಿವ ಕೆಎಚ್ ಮುನಿಯಪ್ಪ ತೋಟದ ಕಾರ್ಮಿಕ ಸಾವು

0

ಚಿಕ್ಕಬಳ್ಳಾಪುರ: ಸಚಿವ ಕೆಎಚ್ ಮುನಿಯಪ್ಪ ಅವರ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ. ನಾಗರಾಜು (45) ಮೃತ ವ್ಯಕ್ತಿ . ಇತ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ನಿವಾಸಿಯಾಗಿದ್ದು, ನಾಲ್ಕು ತಿಂಗಳಿನಿಂದ ಸಚಿವ ಕೆ ಎಚ್ ಮುನಿಯಪ್ಪ ತೋಟದಲ್ಲಿ ಕೆಲಸ ಮಾಡುತಿದ್ದ. ಮೃತ ನಾಗರಾಜು ಪತ್ನಿ ವಿಷ ಸೇವಿಸಿ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಇದೀಗ ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಮೃತ ಶವ ರವಾನೆ‌ ಮಾಡಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version