ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 70 ರೌಡಿ ಶೀಟರ್‌ಗಳಿಗೆ ಸಂಬಂಧಿಸಿದಂತೆ ಎಂಟತ್ತು ಮನೆಗಳಿಗೆ ಸಿಪಿಐ ಈರಯ್ಯ ಮಠಪತಿ ನೇತೃತ್ವದೊಂದಿಗೆ ಪೊಲೀಸ್ ತಂಡ ಮಂಗಳವಾರ ನಸುಕಿನ ಜಾವ ದಿಢೀರ್ ತಪಾಸಣೆ ನಡೆಸಿದ ಕುರಿತು ವರದಿಯಾಗಿದೆ. ದಾಳಿಯ ವೇಳೆ ಅಕ್ರಮ ಆಯುಧಗಳ ಬಗ್ಗೆ ಶೋಧ ನಡೆಸಿ ಯಾವುದೇ ರೌಡಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.
ತಪಾಸಣೆಯ ವೇಳೆ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯು ಆಗಾಗ್ಗೆ ಇಂತಹ ತಪಾಸಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇದರಿಂದಾಗಿ ರೌಡಿಗಳ ಮೇಲೆ ನಿರಂತರ ನಿಗಾ ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದರು.