Home ತಾಜಾ ಸುದ್ದಿ ರಾಜ್ಯಗಳಿಗೆ ಜಿಎಸ್‌ಟಿ ಪಾಲು ಬಿಡುಗಡೆ

ರಾಜ್ಯಗಳಿಗೆ ಜಿಎಸ್‌ಟಿ ಪಾಲು ಬಿಡುಗಡೆ

0

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ 1,18,280 ಕೋಟಿ ರೂ. ಹಣವನ್ನು ಸರಕು ಮತ್ತು ಸೇವಾ ತೆರಿಗೆ (GST) ಪಾಲನ್ನು ಸೇರಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಿದೆ.
ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶದ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಸರಕು ಮತ್ತು ಸೇವಾ ತೆರಿಗೆ (GST) ಪಾಲನ್ನು ಸೇರಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ತಿಂಗಳಿಗೆ 59,140 ಕೋಟಿ ರೂ. ನೀಡಬೇಕಿದ್ದ ಕೇಂದ್ರ ಸರ್ಕಾರ ಈ ಬಾರಿ 1,18,280 ಕೋಟಿ ರೂ. ಹಣವನ್ನು ವರ್ಗಾಯಿಸಿದೆ. ಈ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ ಸಿಕ್ಕಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್​ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.

Exit mobile version