Home ತಾಜಾ ಸುದ್ದಿ ಮೀಸಲಾತಿ ಸೌಲಭ್ಯ ಸಿಕ್ಕರೆ ಅನೂಕೂಲ

ಮೀಸಲಾತಿ ಸೌಲಭ್ಯ ಸಿಕ್ಕರೆ ಅನೂಕೂಲ

0

ಬೀದರ್ : ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರೀಯ ಓಬಿಸಿ ಮೀಸಲಾತಿ ಸೌಲಭ್ಯ ಅಗತ್ಯವಾಗಿದೆ ಎಂದು ವಾರಣಾಸಿ ಪೀಠದ ಡಾ.ಚಂದ್ರಶೇಖರ್ ಶಿವಾಚಾರ್ಯರು ನುಡಿದರು. ಬೀದರ್‌ನ ನೌಬಾದ್ ಬಳಿ ಇರುವ ಜ್ಞಾನ ಶಿವಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳಿಗೆ ಕೇಂದ್ರಿಯ ಓಬಿಸಿ ಮೀಸಲಾತಿ ಸೌಲಭ್ಯ ಸಿಕ್ಕರೆ ಹೆಚ್ಚಿನ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿನ ಯಾವುದೇ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ಶ್ರೀಗಳು ಸ್ಪಷ್ಟವಾಗಿ ನಿರಾಕರಿಸಿದರು.

Exit mobile version