Home ತಾಜಾ ಸುದ್ದಿ ಭಜರಂಗ ದಳ ನಿಷೇದ ವಿಚಾರಕ್ಕೆ ಮೋದಿ ಕಿಡಿ

ಭಜರಂಗ ದಳ ನಿಷೇದ ವಿಚಾರಕ್ಕೆ ಮೋದಿ ಕಿಡಿ

0

ಬಳ್ಳಾರಿ: ಕಾಂಗ್ರೆಸ್ ಪಕ್ಷ ಭಜರಂಗ ಬಲಿಯನ್ನು ಜೈ ಭಜರಂಗ ಬಲಿ ಎಂದು ಹೇಳುವವರನ್ನು ಠಾಣೆಯಲ್ಲಿ ಬಂಧಿಸುವ ಸಂಕಲ್ಪ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಜರೆದಿದ್ದಾರೆ.
ಹೊಸಪೇಟೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇಂದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇದ ಮಾಡುವ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಇದೇ ರೀತಿ ರಾಮನನ್ನು ಬಂಧಿಸುವ ಬಗ್ಗೆ ಮಾತನಾಡಿದ್ದರು. ಇದೀಗ ಹನುಮಂತನ ಬಂಧನದಲ್ಲಿಡಲು ಮುಂದಾಗಿದ್ದಾರೆ ಎಂದರು.
ಕರ್ನಾಟಕ ದೇಶದ ನಂ.೧ ರಾಜ್ಯ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪ ಸಿದ್ಧಿಸಲು ಕಂಕಣ ಕಟ್ಟಿದ್ದೇವೆ. ರಾಜ್ಯ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗಟ್ಟಿ ಆಡಳಿತ, ವಿಕಾಸದ ಕಡೆಗೆ ಪ್ರಣಾಳಿಕೆ ಗಮನ ಹರಿಸಿದೆ. ಕರ್ನಾಟಕದ ರಾಜ್ಯದ ಮಾನ, ಮರ್ಯಾಧೆ, ಸಂಸ್ಕೃತಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲಿದೆ. ಇಲ್ಲಿನ ಜನರಿಗೆ ಆಧುನಿಕ ಸವಲತ್ತು ನೀಡಲು, ಯುವಕರಿಗೆ ಉದ್ಯೋಗವಕಾಶ ನೀಡಲು ಸಂಪೂರ್ಣ ಬದ್ಧವಾಗಿದೆ ಎಂದರು.

Exit mobile version