Home ತಾಜಾ ಸುದ್ದಿ ಬಿಪರ್ಜೋಯ್ ಚಂಡಮಾರುತ ಅಬ್ಬರ

ಬಿಪರ್ಜೋಯ್ ಚಂಡಮಾರುತ ಅಬ್ಬರ

0

ನವದೆಹಲಿ: ನೈಋತ್ಯ ಮುಂಗಾರಿನ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ‘ಬಿಪೊರ್ ಜಾಯ್’ ಚಂಡಮಾರುತ ಅಬ್ಬರ ಜೋರಾಗಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ‘ಬಿಪೊರ್ ಜಾಯ್’ ಚಂಡಮಾರುತ ಗುಜರಾತ್‌ನ ಕಚ್ ಪ್ರದೇಶದಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಭಾರೀ ಮಳೆ ಮತ್ತು ಅತಿ ಹೆಚ್ಚು ಗಾಳಿಯ ವೇಗದೊಂದಿಗೆ ಚಂಡಮಾರುತದಿಂದ ಪ್ರಭಾವಿತವಾಗಿರುತ್ತದೆ, ಚಂಡಮಾರುತವು ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸಬಹುದು” ಎಂದು ಹೇಳಲಾಗಿದ್ದು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.ಗುಜರಾತ್ ರಾಜ್ಯದ ಕರಾವಳಿ ಪ್ರದೇಶಗಳಾದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಕ್ಕೆ ಭಾರತೀಯ ಹವಾಮಾನ ಇಲಾಖೆ ಅಲರ್ಟ್‌ ಘೋಷಣೆ ಮಾಡಿದೆ. ಈ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

Exit mobile version