Home ತಾಜಾ ಸುದ್ದಿ ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ

ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ

0

ಬೆಳಗಾವಿ: ಇದ್ದ ಒಂದು ಎಮ್ಮೆಯನ್ನೂ ಮಾರಿ ಅದರಿಂದ ಬಂದ ಕುಡಿತಕ್ಕೆ ಗಂಡ ಖರ್ಚು ಮಾಡಿದ್ದ ಗಂಡನನ್ನು ಆಕ್ಷೇಪಿಸಿದ ಹೆಂಡತಿಯನ್ನು ಕೊಂದು ತಾನೂ ಸಹಾ ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಅಣ್ಣಪ್ಪ ನಂದಿ ಹಾಗು ಯಲ್ಲವ್ವ ನಂದಿ (41) ದುರಂತ ಅಂತ್ಯ ಕಂಡ ಗಂಡ-ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಕ್ಕಾಗಿ ಇಬ್ಬರಿಗೂ ಜಗಳವಾಗಿದ್ದು, ಆಕೆಯನ್ನು ಕೊಂದು ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version