Home ತಾಜಾ ಸುದ್ದಿ ನೇರಳೆ ಮಾರ್ಗದ ಮೆಟ್ರೋಗೆ ಕನ್ನಡದಲ್ಲೇ ಸಂತಸ ಹಂಚಿಕೊಂಡ ಮೋದಿ

ನೇರಳೆ ಮಾರ್ಗದ ಮೆಟ್ರೋಗೆ ಕನ್ನಡದಲ್ಲೇ ಸಂತಸ ಹಂಚಿಕೊಂಡ ಮೋದಿ

0

ಬೆಂಗಳೂರು: ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ನಡುವೆ 2.1 ಕಿಲೋ ಮೀಟರ್ ಮಾರ್ಗ ಮತ್ತು ಕೆಂಗೇರಿ ಮತ್ತು ಚಲಘಟ್ಟ ನಡುವೆ 2.05 ಕಿಲೋ ಮೀಟರ್ ಮೆಟ್ರೋ ರೈಲು ಮಾರ್ಗ ಇಂದಿನಿಂದ ಸೇವೆಗೆ ಲಭ್ಯವಾಗಿದ್ದು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಪೋಸ್ಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ ಅವರು ತಮ್ಮ ಪೋಸ್ಟ್‌ನಲ್ಲಿ ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಎರಡು ಪ್ರಮುಖ ವಿಸ್ತರಣೆಗಳಲ್ಲಿ ಸೇವೆಗಳು ಪ್ರಾರಂಭವಾಗಿರುವುದು ಸಂತೋಷ ತಂದಿದೆ. ಇದು ಬೆಂಗಳೂರಿನ ನಿವಾಸಿಗಳಿಗೆ ‘ಸುಲಭ ಜೀವನ’ ವನ್ನು ಹೆಚ್ಚಿಸುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

Exit mobile version