Home ತಾಜಾ ಸುದ್ದಿ ನಾನು ಸಿಎಂ ಆಗಬೇಕು ಎಂದರೆ ಬಾಬಣ್ಣ ಗೆಲ್ಲಬೇಕು

ನಾನು ಸಿಎಂ ಆಗಬೇಕು ಎಂದರೆ ಬಾಬಣ್ಣ ಗೆಲ್ಲಬೇಕು

0

ಶ್ರೀರಂಗಪಟ್ಟಣ: ನಾನು ಸಿಎಂ ಆಗಬೇಕು ಎಂದರೆ ಶ್ರೀರಂಗಪಟ್ಟಣ ದಲ್ಲಿ ಬಾಬಣ್ಣ ಗೆಲ್ಲಬೇಕು ಎನ್ನುವ ಮೂಲಕ ಟಗರು ಖ್ಯಾತಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಪರೋಕ್ಷವಾಗಿ‌ ಡಿಚ್ಚಿ‌ ಕೊಟ್ಟಿದ್ದಾರೆ.
ಶ್ರೀರಂಗಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದ ಪಕ್ಕ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ನಾನೇ ಎಂಬುದನ್ನು ತಿಳಿಸಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಕಾರ್ಡ್ ಜಾರಿಗೆ ಬರಲಿದೆ. ಸರ್ಕಾರ ರಚನೆಯಾದ ಕೂಡಲೇ ಹಾಲಿಗೆ ಪ್ರೋತ್ಸಾಹ ಧನ ಹಾಗೂ ಕುಡುಂಬದ ತಲಾ ಸದ್ಯರಿಗೆ ಹತ್ತು ಕೆಜಿ ಅಕ್ಕಿ ಎಂಬುದಾಗಿ ಭರವಸೆ ನೀಡಿದರು.
ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ, ‌ಮಾಜಿ‌ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಸೇರಿದಂತೆ ಇತರರಿದ್ದರು.

Exit mobile version