Home ತಾಜಾ ಸುದ್ದಿ ನನ್ನ ಬಳಿಯೂ ಪೆನ್‌ಡ್ರೈವ್‌ ಇವೆ

ನನ್ನ ಬಳಿಯೂ ಪೆನ್‌ಡ್ರೈವ್‌ ಇವೆ

0

ಬೆಳಗಾವಿ(ಚಿಕ್ಕೋಡಿ): ನನ್ನ ಬಳಿಯೂ ಪೆನ್‌ಡ್ರೈವ್‌ ಇವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಾಂಬ್‌ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಹಳಷ್ಟು ಜನರ ಬಳಿ ಪೆನ್‌ಡ್ರೈವ್ ಇವೆ. ನನ್ನ ಬಳಿಯೂ ಇದೆ, ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಕುಮಾರಸ್ವಾಮಿಯವರ ಮಾತನ್ನು ಮಾಧ್ಯಮದಲ್ಲಿ ಕೇಳಿದ್ದೇನೆ. ವಿರೋಧ ಪಕ್ಷ ಇದೆಯೆಂದು ತೋರಿಸಲು ಅವರು ಆ ರೀತಿ ಮಾತನಾಡಿದ್ದಾರೆ. ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದರು.

Exit mobile version