Home ತಾಜಾ ಸುದ್ದಿ ನನಗೆ ಸ್ಟ್ರೋಕ್ ಆಗಿರೋದು ಇದೇ ಮೊದಲಲ್ಲ

ನನಗೆ ಸ್ಟ್ರೋಕ್ ಆಗಿರೋದು ಇದೇ ಮೊದಲಲ್ಲ

0

ಬೆಂಗಳೂರು: ನನಗೆ ಸ್ಟ್ರೋಕ್ ಆಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ನಾನು ಪಾರ್ಶ್ವವಾಯುಗೆ ತುತ್ತಾಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಹೇಳಿದರು.
ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು, ಮನೆಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, 2ನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನಗೆ ಮೊದಲಿಗೆ ಪಾರ್ಶ್ವವಾಯು ಆಗಿತ್ತು. ನನ್ನ 64 ವರ್ಷದ ಜೀವನದಲ್ಲಿ 4 ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನಗೆ ಇಂದೂ ಪುನರ್ಜನ್ಮವೇ ಸಿಕ್ಕಿದೆ ಎಂದರು.
ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪ್ರತಿ ಕುಟುಂಬಕ್ಕೂ ಧನ್ಯವಾದಗಳನ್ನು ತಿಳಿಸಿದ ಅವರು, ಇನ್ಮುಂದೆ ನನ್ನನ್ನು ಸ್ವಲ್ಪ ಕನಿಕರದಿಂದಲೇ ನೋಡಿ ಎಂದು ಮನವಿ ಮಾಡಿದರು.

Exit mobile version