Home ತಾಜಾ ಸುದ್ದಿ ದಾವಣಗೆರೆ ಜಿಲ್ಲೆಯಲ್ಲಿ ಶೇ 20.78 ಮತದಾನ

ದಾವಣಗೆರೆ ಜಿಲ್ಲೆಯಲ್ಲಿ ಶೇ 20.78 ಮತದಾನ

0

ದಾವಣಗೆರೆ: ಜಿಲ್ಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 11 ರವರೆಗೆ ಏಳು ಕ್ಷೇತ್ರಗಳಲ್ಲಿ ಶೇ 20.78 ರಷ್ಟು ಮತದಾನವಾಗಿದ್ದು, ಅದರಲ್ಲಿ ಚನ್ನಗಿರಿ ಕ್ಷೇತ್ರದಲ್ಲಿ ಯೇ ಅತಿ ಹೆಚ್ಚು ಶೇ.25.39 ರಷ್ಟು ಮತದಾನ ನಡೆದಿದೆ. ಜಗಳೂರು ಕ್ಷೇತ್ರದಲ್ಲಿ ಶೇ 22.30, ಹರಿಹರ ಶೇ 22.95, ದಾವಣಗೆರೆ ಉತ್ತರ ಶೇ. 18.35 ದಾವಣಗೆರೆ ದಕ್ಷಿಣ ಶೇ 17.46, ಮಾಯಕೊಂಡ ಶೇ 19.21, ಹೊನ್ನಾಳಿ ಶೇ 20.39 ರಷ್ಟು ಮತದಾನವಾಗಿದೆ. ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ವಿಶೇಷ ಚೇತನ ಸ್ನೇಹಿ ಮತಗಟ್ಟೆ ಕೊಂಡಜ್ಜಿ, ಇಲ್ಲಿ 25 ಜನ ವಿಶೇಷ ಚೇತನರು ಒಟ್ಟಿಗೆ ಬಂದು ಮತದಾನ ಮಾಡಿದರು.

ಮತದಾನ ಮಾಡಿದ 88 ರ ಪಾರ್ಶ್ವವಾಯು ಪೀಡಿತ ವೃದ್ಧೆ ಮತ್ತು ಅಶಕ್ತ ವೃದ್ಧೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅಣಜಿ ಗ್ರಾಮದ ಎಚ್.ವಿ.ಎಸ್ ಪಿ ಕಾಲೇಜಿನ ಮತಗಟ್ಟೆಗೆ 88 ವರ್ಷದ ವಯೋವೃದ್ಧೆ ಕೊಟ್ರಮ್ಮ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪಾರ್ಶ್ವವಾಯು ಪೀಡಿತೆ ಆಗಿರುವ ಕೊಟ್ರಮ್ಮ ಅವರು ಈ ಇಳಿವಯಸ್ಸಲ್ಲೂ ಖಾಯಿಲೆ ಬದಿಗಿಟ್ಟು ಬಂದು ತಮ್ಮ ಹಕ್ಕು ಚಲಾಯಿಸಿದರು. ಅದರಂತೆ ಇನ್ನೋರ್ವ 75 ವರ್ಷದ ವಯೋವೃದ್ಧೆ ಕೊಟ್ರಮ್ಮ ಎನ್ನುವ ಅಶಕ್ತ ವೃದ್ಧೆಯು ಕೂಡ ವ್ಹೀಲ್ ಚೇರ್ ನಲ್ಲಿ ಬಂದು ಮತಚಲಾಯಿಸಿದರು. ಇವರಿಬ್ಬರು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಅವರು ತಮ್ಮ ಕರ್ತವ್ಯದ ಬದ್ಧತೆ ತೋರಿರುವುದು ನೋಡಿದರೆ ಮತದಾನ ಚಲಾಯಿಸದೆ ನಿರ್ಲಕ್ಷ್ಯ ತೋರುವ ಯುವಜನಾಂಗದವರನ್ನು ನಾಚಿಸುವಂತೆ ಮಾಡಿದೆ.

Exit mobile version