Home ನಮ್ಮ ಜಿಲ್ಲೆ ಕೊಪ್ಪಳ ಕುಮಾರಸ್ವಾಮಿಗೆ ಹೊಟ್ಟೆ ಉರಿ

ಕುಮಾರಸ್ವಾಮಿಗೆ ಹೊಟ್ಟೆ ಉರಿ

0

ಕೊಪ್ಪಳ: ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಭವಿಷ್ಯ ಇಲ್ಲ. ಕಾಂಗ್ರೆಸ್‌ಗೆ 136 ಸ್ಥಾನ ಬಂದಿದ್ದು, ಕುಮಾರಸ್ವಾಮಿ ಲೆಕ್ಕಾಚಾರ ತಲೆ ಕೆಳಗೆ ಆಗಿದೆ. ಹಾಗಾಗಿ ಅವರಿಗೆ ಹೊಟ್ಟೆ ಉರಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ನನ್ನ ಸಂಪರ್ಕಕ್ಕೆ ಬಂದಿಲ್ಲ, ಬಂದರೆ ತಿಳಿಸುತ್ತೇನೆ. ನಾನು ಈ ಹಿಂದೆ ಹೇಳಿದ್ದೆ ಬಿಜೆಪಿನಲ್ಲೂ ಯಾರು ಇರಲ್ಲ. ಜೆಡಿಎಸ್‌ನಲ್ಲೂ ಯಾರು ಇರಲ್ಲ. ಏಕೆಂದರೆ ನಾವು ಕೊಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್‌ಗೆ ನಿರಂತರ ಆಶೀರ್ವಾದ ಮಾಡುತ್ತಾರೆ ಎಂದು ಗೊತ್ತಾಗಿದೆ. ಹೀಗಾಗಿ ಇನ್ನೊಂದು ಆರು ತಿಂಗಳಲ್ಲಿ ಬರಬಹುದು, ಯಾರು ಬರುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಇದೆಲ್ಲವನ್ನು ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

Exit mobile version