Home ತಾಜಾ ಸುದ್ದಿ ಆಡಿಯೋ ಬಗ್ಗೆ ತನಿಖೆ ಮಾಡುತ್ತೇವೆ

ಆಡಿಯೋ ಬಗ್ಗೆ ತನಿಖೆ ಮಾಡುತ್ತೇವೆ

0
CM

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಆಡಿಯೋ ವಿಚಾರ. ಆಡಿಯೋ ತಿರುಚಲಾಗಿದೆಯೋ ಏನು ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೆವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಇಲ್ಲಿನ ಆದರ್ಶನಗರದ ತಮ್ಮ‌ ನಿವಾಸದಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು‌. ಬಿ.ಎಲ್. ಸಂತೋಷ ಲಿಂಗಾಯತ ಮತಗಳ ಬೇಡ ಎಂಬ ಸುದ್ದಿ ಫೇಕ್ ಆಗಿದೆ. ಈಗಾಗಲೇ ಈ ಬಗ್ಗೆ ದೂರು ಸಹ ದಾಖಲು ಮಾಡಲಾಗಿದೆ ಎಂದರು.
ಡಿಕೆ ಶಿವಕುಮಾರ ಬಿಜೆಪಿ ಹನುಮಾನ್ ಚಾಲೀಸ್ ಪಠಣ ಮಾಡಲಿ ನಾವು ಗ್ಯಾರಂಟಿ ಯೋಜನೆ ಪಠಣ ಮಾಡುತ್ತೇವೆ ಎಂಬುದಕ್ಕೆ‌ ಪ್ರತಿಕ್ರಿಯಿಸಿ ಡಿಕೆಶಿ ಏನು ಬೇಕಾದರೂ ಪಠಣ ಮಾಡಲಿ ಎಂದರು. ಶಿವರಾಜ್ ಕುಮಾರ್ ಮೇಲೆ ಬಿಜೆಪಿ ಟ್ರೋಲ್ ಹಿನ್ನಲೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾವ ನಟರು ಕೂಡ ಯಾವ ಪಕ್ಷ ಪರವಾಗಿ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟಿಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೆನು ಅಭ್ಯಂತರ ಇಲ್ಲ ಎಂದರು.
ಸೋನಿಯಾ ಗಾಂಧಿ ಪ್ರಚಾರಕ್ಕೆ ಬರುತ್ತಿದ್ದಾರೆ. ಅದು ಅವರ ಪಕ್ಷ ಪ್ರಚಾರ ಎಂದರಲ್ಲದೆ, ಇಂದು ಮೋದಿ ಹಾವೇರಿಗೆ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಮೋದಿ ಅಲೆ ಜಾಸ್ತಿಯಾಗುತ್ತದೆ ಎಂದರು.

Exit mobile version