Home ತಾಜಾ ಸುದ್ದಿ ಟ್ರಂಪ್ ರೀತಿ ಕರ್ನಾಟಕ ಬಿಜೆಪಿ ಸೋಲು ಕಾಣಲಿದೆ

ಟ್ರಂಪ್ ರೀತಿ ಕರ್ನಾಟಕ ಬಿಜೆಪಿ ಸೋಲು ಕಾಣಲಿದೆ

0


ಬಳ್ಳಾರಿ: ಟ್ರಂಪ್ ಗೆ ಅದ ಗತಿಯೇ ಕರ್ನಾಟಕ ಬಿಜೆಪಿಗೆ ಆಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಆಗ ಟ್ರಂಪ್ ಪರ ಪ್ರಚಾರ ಮಾಡಿದ್ದರು. ಆಗ ಟ್ರಂಪ್ ಸೋತಿದ್ದರು. ಈಗ ಕರ್ನಾಟಕ ಬಿಜೆಪಿಗೂ ಇದೇ ಸ್ಥಿತಿ ಬರಲಿದೆ ಎಂದರು.
ಕರ್ನಾಟಕ ವಿಧಾನ ಸಭಾ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಆಗಲಿದೆ. ಇದೆ ಕಾರಣಕ್ಕೆ ಮೋದಿ ಅವರಿ ಕರ್ನಾಟಕವನ್ನೇ ತಮ್ಮ ಮನೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಆಂಜನೇಯನ ಜನ್ಮ ಭೂಮಿ ಕುರಿತು ವಿವಾದ ಇದ್ದಾಗ ಆರ್ ಎಸ್ ಎಸ್, ಬಿಜೆಪಿ ಯಾಕೆ ಮೌನ ವಹಿಸಿತು. ಯಾಕಂದ್ರೆ ಆತ ದ್ರಾವಿಡ ಎಂದು ಅವರು ಕುಟುಕಿದರು.
ಯಶೋಧಾ ಬಾಯಿ ರಕ್ಷಣೆ ಮಾಡದವರು ರಾಮ ಭಕ್ತರಾಗಲ್ಲ. ಕೇವಲ ಭಜರಂಗಿ ಹೆಸರು ಇಟ್ಟಕೊಂಡ ಕ್ಷಣ ವಿರೋಧ ಮಾಡಲೇ ಬಾರದು ಎಂದು ಹೇಳುವುದು ಎಷ್ಟು ಸರಿ. ಭಜರಂಗಿ ಹೆಸರು ಇಟ್ಟುಕೊಂಡು ಅಸಂವಿಧಾನಿಕ ಕೆಲಸ ಮಾಡಿದರೆ ಒಪ್ಪಬೇಕ ಎಂದು ಅವರು ಪ್ರಶ್ನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಮೊಹಮದ್ ರಫೀಕ್, ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ, ಶೈಲೇಂದ್ರ, ವಸಂತ ರಾವ್ ಕೂರ್ಕೆ ಮಾಜಿ ಮಂತ್ರಿ ಸಾಕೆ ಶೈಲಜ ನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

Exit mobile version