Home ತಾಜಾ ಸುದ್ದಿ ಅವಕಾಶ ಕೊಟ್ಟರೆ ನಾನು ರಾಜ್ಯಾಧ್ಯಕ್ಷನಾಗುವೆ

ಅವಕಾಶ ಕೊಟ್ಟರೆ ನಾನು ರಾಜ್ಯಾಧ್ಯಕ್ಷನಾಗುವೆ

0

ಬೆಳಗಾವಿ: ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ ಎಂದು ಸಂಸದ ರಮೇಶ್​​ ಜಿಗಜಿಣಗಿ ಹೇಳಿದ್ದಾರೆ.
ಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಬೇಕೆಂದು ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ ಬಿಜೆಪಿಯ (BJP) ಹಿರಿಯ ನಾಯಕ. ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ ಎಂದಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ? ಎಂದು ಪ್ರಶ್ನಿಸಿದ್ದಾರೆ.

Exit mobile version