Home ತಾಜಾ ಸುದ್ದಿ ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಆಗುವ ಮಚ್ಚೆ ಇದೆ

ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಆಗುವ ಮಚ್ಚೆ ಇದೆ

0
C T Ravi

ಬಾಗಲಕೋಟೆ: ಸಿದ್ದರಾಮಯ್ಯ ಅವರು ನುಡಿದಿದೆಲ್ಲವೂ ಸುಳ್ಳಾಗುತ್ತದೆ. ಅವರ ಹೇಳಿಕೆ ಉಲ್ಟಾ ಆಗುವ ಮಚ್ಚೆಯೊಂದು ಅವರ ನಾಲಿಗೆ ಮೇಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಬೀಳಗಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೇಳಿದ್ದರ ವಿರುದ್ಧವಾಗುತ್ತದೆ. ಹಿಂದೆಯೂ ಅನೇಕ ಬಾರಿ ಹಾಗೆ ಆಗಿದೆ. ಯಡಿಯೂರಪ್ಪ ಅವರಪ್ಪರಾಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದರು ಕೊನೆಗೆ ಬಿಎಸ್‌ವೈ ಸಿಎಂ ಆದರು ಎಂದು ಕುಟುಕಿದರು.
ಮೋದಿ ಪ್ರಧಾನಿ ಆಗೋಕೆ ಸಾಧ್ಯನೇ ಇಲ್ಲ ಎಂದಿದ್ದರು, ತಾವು ಎರಡನೇ ಬಾರಿಗೆ ಸಿಎಂ ಆಗುವ ಬಗ್ಗೆಯೂ ಹೇಳಿದ್ದರು. ಅವೆಲ್ಲವೂ ಸುಳ್ಳಾಗುತ್ತಲೇ ಬಂದಿವೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಆದರೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯೋದು ನಿಶ್ಚಿತ ಎಂದರು.

Exit mobile version