ಬೆಂಗಳೂರು: ದೀಪಾವಳಿಯ ಸಂಭ್ರಮದ ಮಧ್ಯೆ ಕನ್ನಡಿಗರ ಮನ ಗೆದ್ದಿರುವ ಹೊಸ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ವಿಶ್ವದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್ ಒಟ್ಟಾಗಿ ತಂದುಕೊಟ್ಟಿರುವ “ಲೈಫ್ ಇಸ್ ಕ್ಯಾಸಿನೋ” ಹಾಡು ಈ ಹಬ್ಬದ ಸೀಸನ್‌ನ ಹಾಟ್ ಟಾಪಿಕ್ ಆಗಿದೆ.
ಆರ್‌ಸಿಬಿ ತಂಡ ಸೇರಿದಾಗಿನಿಂದಲೇ ಕ್ರಿಸ್ ಗೇಲ್ ಅವರ ಅದೃಷ್ಟ ಬದಲಾಗಿತ್ತು. ಅವರು ಪ್ರತಿ ಪಂದ್ಯದಲ್ಲೂ ರನ್‌ಗಳ ಮಳೆಯನ್ನೇ ಸುರಿಸಿ, ಕನ್ನಡಿಗರ ಮನದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಆರ್‌ಸಿಬಿ ಬಿಡುವಾದರೂ, ಗೇಲ್ ಅವರ ಮೇಲಿನ ಅಭಿಮಾನ ಕಡಿಮೆಯಾಗಲಿಲ್ಲ. ಇದೀಗ ಚಂದನ್ ಶೆಟ್ಟಿ ಅವರೊಂದಿಗೆ ಮತ್ತೊಮ್ಮೆ ಕನ್ನಡಿಗರ ಮನ ಗೆಲ್ಲಲು ಗೇಲ್ ಬಂದಿದ್ದಾರೆ.
ಈ ಹೊಸ ಹಾಡಿನಲ್ಲಿ ಚಂದನ್ ಶೆಟ್ಟಿ ಜೀವನವನ್ನು ಒಂದು ಕ್ಯಾಸಿನೋ ಆಟಕ್ಕೆ ಹೋಲಿಸಿ “ಹಣವೇ ಎಲ್ಲಾ, ದುಡ್ಡಿನ ಮುಂದೆ ಏನು ಇಲ್ಲ” ಎಂಬ ತೀಕ್ಷ್ಣ ಸಾಹಿತ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಹಾಡು ಕೇವಲ ಮನರಂಜನೆಗೆ ಸೀಮಿತವಾಗದೇ, ಇಂದಿನ ಸಾಮಾಜಿಕ ವಾಸ್ತವಿಕತೆಯನ್ನೂ ಪ್ರತಿಬಿಂಬಿಸುತ್ತದೆ.
ಸಂಗೀತ, ದೃಶ್ಯ ವಿನ್ಯಾಸ ಹಾಗೂ ಗೇಲ್–ಶೆಟ್ಟಿ ಜೋಡಿಯ ಉತ್ಸಾಹ ಎಲ್ಲವನ್ನೂ ಸೇರಿಸಿ “ಲೈಫ್ ಇಸ್ ಕ್ಯಾಸಿನೋ” ಹಾಡು ಈಗ ಯೂಟ್ಯೂಬ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್ ಆಗಿದೆ. ದೀಪಾವಳಿ ಹಬ್ಬಕ್ಕೆ ಚಂದನ್ ಶೆಟ್ಟಿ ನೀಡಿದ ಈ ಗಿಫ್ಟ್ ಅಭಿಮಾನಿಗಳ ಹೃದಯದಲ್ಲಿ ಹೊಳಪು ಮೂಡಿಸಿದೆ.