ದಾಂಡೇಲಿ : ಪ್ರೇಮಜೀ ಪ್ರೊಡಕ್ಷನ್ ನಿರ್ಮಾಪಕರಾದ ದಾಂಡೇಲಿಯ ಉದ್ಯಮಿ, ಸಮಾಜ ಸೇವಕ ಪ್ರೇಮಾನಂದ ವಿ. ಗವಸ ಅವರ ಪ್ರಥಮ ಚಲನಚಿತ್ರ ರುದ್ರ ಅವತಾರ ಸಿನಿಮಾ ಸದ್ಯದಲ್ಲೆ ಸೆಟ್ಟೇರಲಿದ್ದು, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಯಶಸ್ವಿ ಉದ್ಯಮಿಯಾಗಿ ಕಾರ್ಯನಿರ್ವಹಿಸಿ ಪ್ರೇಮಾನಂದ ಇದೀಗ ಸಿನೆಮಾ ರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದು ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನೆಮಾ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿರುವ ಅವರು ಸಾಮಾಜಿಕ ಹಂದರವನ್ನೊಳಗೊಂಡ ಉತ್ತಮ ಸಂದೇಶ ನೀಡುವ ಕತೆಯನ್ನು ಸಿನೆಮಾಕ್ಕೆ ಆಯ್ದುಕೊಳ್ಳಲಾಗಿದೆ.
ಪ್ರಥಮ ಬಾರಿಗೆ ಸಿನೆಮಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ನವಂಬರನಲ್ಲಿ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಪ್ರಾರಂಭಿಸುತ್ತಿದ್ದು 2026ರ ಮೇ ಅಂತ್ಯದಲ್ಲಿ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯಾಗುವ ನಿರೀಕ್ಷೆ ಇದೆ. ರುದ್ರ ಅವತಾರ ಸಿನೆಮಾದ ನಾಯಕ ನಟನಾಗಿ ಶಶಿಕುಮಾರ ಅಭಿನಯಿಸಲಿದ್ದು, ಹಿರಿಯ ನಟಿ ತಾರಾ, ಶೋಭರಾಜ, ಪ್ರೇಮಾನಂದ ಗವಸ ಮತ್ತು ಕಿರುತೆರೆಯ ಹಾಗೂ ಸ್ಥಳೀಯ ಉದಯೋನ್ಮುಖ ನಟರಿಗೆ ಅವಕಾಶ ಕಲ್ಪಿಸಿದ್ದಾರೆ.
ರಚನೆ ಮತ್ತು ನಿರ್ದೆಶನವನ್ನು ಸವಾದ್ ಮಂಗಳೂರು, ಛಾಯಾಗ್ರಾಹಕರಾಗಿ ಅಲನ್ ಭರತ, ಸಂಗೀತ ನಿರ್ದೆಶನ ಅಲೆಕ್ಸ್ ಪಾಲ್, ಸಂಕಲನ ಶ್ರೀಕಾಂತ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.