ಪ್ರವಾಸೋದ್ಯಮ ಪಟ್ಟಣ ದಾಂಡೇಲಿ: ಸ್ವಚ್ಛತೆಗಾಗಿ ವಿಶೇಷ ಅಭಿಯಾನ ಆರಂಭ

0
66

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಗರವಾಗಿ ಗುರುತಿಸಿಕೊಂಡಿರುವ ದಾಂಡೇಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಏಕೆಂದರೆ ಪ್ರವಾಸಿ ತಾಣ ವಾಗಿರುವುದರಿಂದ ದೇಶ ಮತ್ತು ರಾಜ್ಯದ ಮೂಲೆ ಮೂಲೆಗಳಲಿಂದ ಜನರು ಬರುವುದರಿಂದ ಪ್ರವಾಸಿ ತಾಣಗಳುನ್ನು ಸ್ವಚ್ಛವಾಗಿಡುವುದು ಸ್ಥಳಿಯ ಇಲಾಖೆಗಳ ಕರ್ತವ್ಯವಾಗಿದೆ.

ಅದರಬೆನ್ನಲ್ಲೇ ಸ್ವಚ್ಛತೆಯೇ ಸೇವೆ ಎನ್ನುವ ಮನೋಭಾವದೊಂದಿಗೆ ದೇಶವ್ಯಾಪಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಇಲಾಖೆಗಳು, ಸಂಘಟನೆಗಳು ಮತ್ತು ಸಾರ್ವ ಜನಿಕರ ಸಹಕಾರದೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ಅಂದೋಲನದಲ್ಲಿ ಸ್ಥಳೀಯ ನಾಗರಿಕರು,ಸಂಘಟನೆಗಳು, ಜನಪ್ರತಿನಿಧಿಗಳು ಕೈ ಜೋಡಿಸಿ ನಗರವನ್ನು ಸ್ವಚ್ಯವಾಗಿರಿಸುವಂತೆ ಮನವಿ ಮಾಡಿದರು. ದಾಂಡೇಲಿಯಲ್ಲಿ ಇಂದು (ಗುರುವಾರ ) ನಗರಸಭೆಯಿಂದ ಏರ್ಪಡಿಸಿದ ಸ್ವಚ್ಛತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವಿವೇಕ ಬನ್ನೆ ಮಾತನಾಡಿ ನಗರದ ಸ್ವಚ್ಚತೆಗೆ ಸಾರ್ವಜನಿಕರು ಸ್ಥಳೀಯ ಸಂಸ್ಥೆಯೊಟ್ಟಿಗೆ ಕೈ ಜೋಡಿಸಿದಲ್ಲಿ ರೋಗ ರುಜಿನಗಳಿಲ್ಲದ ಸ್ವಚ್ಚ ನಗರ ನಿರ್ಮಾಣ ಸಾಧ್ಯ. ಎಲ್ಲರೂ ಕೈಜೋಡಿಸಿ ಸಹಕರಿಸಿ ಎಂದು ಮನವಿ ಮಾಡಿದರು. ತಹಶೀಲ್ದಾರ್ ಶೈಲೇಶ್ ಪರಮಾನಂದ, ನಗರಸಭಾ ಸದಸ್ಯರು, ಸಾರ್ವಜನಿಕರು ನಗರಸಭೆ ಕಾರ್ಯಾಲಯದಿಂದ ದಂಡಕಾರಣ್ಯ ಉದ್ಯಾನವನದವರೆಗಿನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Previous articleರಾಮನಗರ ಜಿಲ್ಲೆಯ ಜನರ ಕನಸಾಗಿದ್ದ ಮಳಿಗೆ ಕಾರ್ಯಾರಂಭ
Next articleಸ್ವದೇಶಿ ಮೆಸೇಜಿಂಗ್ ಆ್ಯಪ್‌ Arattai ಬೆಂಬಲಿಸಿದ ಧರ್ಮೇಂದ್ರ ಪ್ರಧಾನ್

LEAVE A REPLY

Please enter your comment!
Please enter your name here