Home ನಮ್ಮ ಜಿಲ್ಲೆ ಶಿವಮೊಗ್ಗ ಶಿವಮೊಗ್ಗ: ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ

ಶಿವಮೊಗ್ಗ: ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ

0

ಶಿವಮೊಗ್ಗ: ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ಬರೋಬ್ಬರಿ 1.06 ಕೋಟಿ ವಂಚಿಸಲಾಗಿದೆ.

ಭದ್ರಾವತಿಯ 48 ವರ್ಷದ ವ್ಯಕ್ತಿಯ ಮೊಬೈಲ್‌ಗೆ ಜು. 10ರಂದು ಕರೆ ಮಾಡಿದ್ದ ತನಿಷ್ಕಾ ಸನ್ಯಮ್ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ, ಟ್ರೇಡಿಂಗ್ ಮಾಡುವ ಬಗ್ಗೆ ಕೇಳಿದ್ದರು. ಈ ವೇಳೆ ಲಿಂಕ್ ಕಳುಹಿಸಿದ್ದು, ವಾಟ್ಸ್ಆ್ಯಪ್ ಮೂಲಕ ಜಾಯಿನ್ ಆಗಿ ಅದರಲ್ಲಿ ಪೂರ್ಣ ವಿವರ ದಾಖಲಿಸುವಂತೆ ತಿಳಿಸಿದ್ದರು. ಅಂತೆಯೇ ವ್ಯಕ್ತಿಯು ಸಂಪೂರ್ಣ ಮಾಹಿತಿ ದಾಖಲಿಸಿದ್ದರು.

ಕೊನೆಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ವ್ಯಕ್ತಿಯಿಂದ ಹಂತ ಹಂತವಾಗಿ 1.06 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕೊನೆಗೆ ಲಾಭಾಂಶದ ಹಣ ಮರಳಿಸುವಂತೆ ಕೇಳಿದಾಗ ವಿವಿಧ ಟ್ಯಾಕ್ಸ್‌ಗಳ ನೆಪ ಹೇಳಿದ್ದು, ಅನುಮಾನಗೊಂಡ ವ್ಯಕ್ತಿಯು ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿಗೆ 4.86 ಲಕ್ಷ ರೂ. ಮೋಸ: ಇನ್‌ಸ್ಟಾಗ್ರಾಂನಲ್ಲಿದ್ದ ಜಾಹೀರಾತು ನಂಬಿದ ಶಿವಮೊಗ್ಗದ ವಿದ್ಯಾರ್ಥಿನಿಗೆ ಕೇವಲ ಆರು ದಿನದಲ್ಲಿ 4.86 ಲಕ್ಷ ರೂ. ವಂಚನೆ ಮಾಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್ ಕುರಿತು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ 22 ವರ್ಷದ ವಿದ್ಯಾರ್ಥಿನಿಗೆ ವಿವಿಧ ವಾಟ್ಸ್ಆ್ಯಪ್ ನಂಬರ್‌ಗಳಿಂದ ಕರೆ ಬಂದಿತ್ತು. ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ ಲಾಭ ಗಳಿಸಬಹುದೆಂದು ನಂಬಿಸಿದ್ದರು. ಆರು ದಿನದಲ್ಲಿ ವಿದ್ಯಾರ್ಥಿನಿಯಿಂದ 4.86 ಲಕ್ಷ ರೂ. ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಲಾಭಾಂಶ ನೀಡದೆ ಇದರಿಂದ ವಂಚನೆಗೊಳಗಾದ ಅರಿವಾಗಿ ವಿದ್ಯಾರ್ಥಿನಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version