Home ನಮ್ಮ ಜಿಲ್ಲೆ ರಾಮನಗರ ರಾಮನಗರ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ, ಮೂವರ ಬಂಧನ

ರಾಮನಗರ: ಸ್ವಾಮೀಜಿ ಆತ್ಮಹತ್ಯೆ ಪ್ರಕರಣ, ಮೂವರ ಬಂಧನ

0

ರಾಮನಗರ ಜಿಲ್ಲೆ ಮಾಗಡಿಯ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿ ಹನಿಟ್ರ್ಯಾಪ್‌ ಮಾಡಿಸಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ‌‌. ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಬಂಧಿತರು. ಬಸವಲಿಂಗ ಶ್ರೀಗಳಿಗೂ ಹಾಗೂ ಆರೋಪಿ ಕಣ್ಣೂರು ಶ್ರೀಗಳಿಗೂ ವೈಷಮ್ಯ ಇತ್ತು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಳಸಿಕೊಂಡು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿದ್ದರು. ಯುವತಿಯು ಬಸವಲಿಂಗ ಸ್ವಾಮೀಜಿ ಜೊತೆ ವಿಡಿಯೊ ಚಾಟಿಂಗ್‌ ಮಾಡಿದ್ದು, ಅದನ್ನು ವಕೀಲ ಮಹದೇವಯ್ಯರಿಗೆ ನೀಡಿದ್ದರು. ಮಹದೇವಯ್ಯ ಅದನ್ನು ಸಿ.ಡಿ. ಮಾಡಿ ಮುಖಂಡರಿಗೆ ಹಂಚಿದ್ದರು ಎಂದು ಆರೋಪಿಸಲಾಗಿದೆ.

Exit mobile version