Home ನಮ್ಮ ಜಿಲ್ಲೆ ರಾಮನಗರ ಸ್ಟಾಲಿನ್ ತಿಥಿ ಮಾಡಿದ ಪ್ರತಿಭಟನಾಕಾರರು

ಸ್ಟಾಲಿನ್ ತಿಥಿ ಮಾಡಿದ ಪ್ರತಿಭಟನಾಕಾರರು

0

ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಮನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಮೌನಾಚರಣೆ ಮಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ಜನಪರ ವೇದಿಕೆಯಿಂದ ಐಜೂರು ವೃತ್ತದಲ್ಲಿ ಸ್ಟಾಲಿನ್ ಸತ್ತೋದ ಎಂದು ಬಾಯಿಬಡಿದುಕೊಂಡು ಸ್ಟಾಲಿನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮತ್ತೆ ಹುಟ್ಟಿ ಬರಬೇಡಿ ಎಂದು ಅಣಕು ತಿಥಿ ಮಾಡಿ ತಿಂಡಿ-ತಿನಿಸುಗಳನ್ನು ಇಟ್ಟು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದಾರೆ.

Exit mobile version