ಬೆಂಗಳೂರು: ಲೋಕಶಿಕ್ಷಣ ಟ್ರಸ್ಟ್, ಸಂಯುಕ್ತ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆಗಸ್ಟ್ 9ರ ಶನಿವಾರ ಜ್ಞಾನದೀಪ್ತಿ-2025 ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರ ಆಯೋಜಿಸಿದೆ.
ಬೆಂಗಳೂರು ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆಯುವ ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ ಉದ್ಘಾಟಿಸಲಿದ್ದಾರೆ. ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತ್ರಿಲೋಕ ಚಂದ್ರ, ಶಿಕ್ಷಣ ಆಯುಕ್ತರು, ಕರ್ನಾಟಕ ಸರ್ಕಾರ. ಯು.ಬಿ.ವೆಂಕಟೇಶ್, ಮಾಜಿ ಎಂಎಲ್‌ಸಿ, ಎಲ್‌ಎಸ್‌ಟಿ ಧರ್ಮದರ್ಶಿಗಳು. ಡಾ.ಸಿ.ಆರ್.ಚಂದ್ರಶೇಖರ್ ಖ್ಯಾತ ಮನೋ ವೈದ್ಯರು. ಡಾ.ಗುರುರಾಜ ಕರಜಗಿ, ಖ್ಯಾತ ಶಿಕ್ಷಣ ತಜ್ಞರು, ಎಲ್‌ಎಸ್‌ಟಿ ಧರ್ಮದರ್ಶಿಗಳು ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತಿ ಕೇಶವ್ ಕೆ ದೇಸಾಯಿ, ಕೈಗಾರಿಕೋದ್ಯಮಿ, ಎಲ್‌ಎಸ್‌ಟಿ ಧರ್ಮದರ್ಶಿಗಳು. ಡಿ.ಆರ್.ಪಾಟೀಲ್, ಮಾಜಿ ಎಂಎಲ್ಎ, ಎಲ್‌ಎಸ್‌ಟಿ ಧರ್ಮದರ್ಶಿಗಳು.
ಎರಡು ಗೋಷ್ಠಿಗಳು: ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿಗಾಗಿ ಎರಡು ಗೋಷ್ಠಿ ಆಯೋಜಿಸಲಾಗಿದೆ.
‘ಮಕ್ಕಳು, ಶಿಕ್ಷಕರಿಗೆ ಮಾನಸಿಕ ಒತ್ತಡದಿಂದ ಬಿಡುಗಡೆ ಹೇಗೆ?’ ಗೋಷ್ಠಿಯನ್ನು ಡಾ. ಸಿ.ಆರ್.ಚಂದ್ರಶೇಖರ್ ನಡೆಸಿಕೊಡಲಿದ್ದಾರೆ. ಶಿಕ್ಷಕರ ಜೊತೆ ಸಂವಾದ ನಡೆಸಲಿದ್ದಾರೆ.
‘ಶಿಕ್ಷಕನಿಂದ ಗುರುವೆಡೆಗೆ ಪಯಣ’ ಎಂಬುದು 2ನೇ ಗೋಷ್ಠಿಯಾಗಿದೆ. ಇದನ್ನು ಡಾ. ಗುರುರಾಜ ಕರಜಗಿ ನಡೆಸಿಕೊಡಲಿದ್ದಾರೆ. ಬಳಿಕ ಶಿಕ್ಷಕರ ಜೊತೆ ಸಂವಾದ ಮಾಡಲಿದ್ದಾರೆ.
ಸಂಯುಕ್ತ ಕರ್ನಾಟಕ ಯೂ ಟ್ಯೂಬ್‌ನಲ್ಲಿ ಜ್ಞಾನದೀಪ್ತಿ-2025 ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರದ ನೇರ ಪ್ರಸಾರ ಇರುತ್ತದೆ.