Home ನಮ್ಮ ಜಿಲ್ಲೆ ಬೆಳಗಾವಿ ಆರ್ಸಿಯು ವಿರುದ್ಧ ಠಾಣೆ ಮೆಟ್ಟಿಲು ಹತ್ತಿದ ರೈತರು

ಆರ್ಸಿಯು ವಿರುದ್ಧ ಠಾಣೆ ಮೆಟ್ಟಿಲು ಹತ್ತಿದ ರೈತರು

0

ರೈತರ ಆಕ್ರೋಶಕ್ಕೆ ಹೆದರಿ ಬೋರವೆಲ್ ವಾಹನ ಬಿಟ್ಟು ಪಲಾಯನ

ಬೆಳಗಾವಿ: ರೈತರ ಜಮೀನಿನಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೇ ಬೋರವೆಲ್ ಕೊರೆಸುತ್ತಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವರು ರೈತರ ಆಕ್ರೋಶಕ್ಕೆ ಹೆದರಿ ಸ್ಥಳದಿಂದ ಕಾಲ್ಕಿತ್ತ ಘಟನೆ ಹಿರೇಬಾಗೇವಾಡಿ ಬಳಿ ಇಂದು ಮಧ್ಯಾಹ್ನ ನಡೆದಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು, ನಂತರ ಎಲ್ಲರನ್ನು ಠಾಣೆಗೆ ರೆದುಕೊಂಡು ಹೋದರು ಎಂದು ಗೊತ್ತಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ರಾಣಿ ಚನ್ನಮ್ಮ ವಿವಿಯವರೆಗಿನ ಸಿಸಿ ರಸ್ತೆಗೆ ಮುಖ್ಯಮಂತ್ರಿಗಳು ಇತ್ತೀಚೆಗೆ ಬೆಳಗಾವಿಯಲ್ಲಿ ಚಾಲನೆ ನೀಡಿದ್ದರು.


ಇಂದು ರಾಣಿ ಚನ್ನಮ್ಮ ವಿವಿಯವರು ಈ ರಸ್ತೆಗೆ ಹೊಂದಿಕೊಂಡ ಶ್ರೀಮಂತಗೌಡ ಪಾಟೀಲ ಎಂಬುವರ ಪೂವರ್ಾನುಮತಿ ಪಡೆಯದೇ ಬೋರವೆಲ್ ಕೊರೆಯಿಸುವ ಕೆಲಸ ನಡೆಸಿದ್ದರು. ಈ ಸುದ್ದಿ ತಿಳಿದ ರೈತರು ಸ್ಥಳಕ್ಕೆ ಧಾವಿಸಿದರು, ಅಲ್ಲಿ ಬೋರವೆಲ್ದವರನ್ನು ಪ್ರಶ್ನೆ ಮಾಡಿದಾಗ ಅವರು ಬೋರವೆಲ ವಾಹನವನ್ನು ಅಲ್ಲಿಯೇ ಬಿಟ್ಟು ಹೋದರು ಎಂದು ಗೊತ್ತಾಗಿದೆ.


ಗಮನಿಸಬೇಕಾದ ಸಂಗತಿ ಎಂದರೆ, ಈ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುವ ಮುನ್ನವೇ ಆ ಭಾಗದ ರೈತರು  ರಸ್ತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಪತ್ರ , ಅರ್ಪಿಸಿದ್ದರು.


ಇಲ್ಲಿಆರ್ಸಿಯುದವರು ರಸ್ತೆ ಯಾವ ರೀತಿ ಇರುತ್ತದೆ, ರೈತರಿಗೆ ತೊಂದರೆ ಆಗದಂತೆ ಯಾವ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಇದರಿಂದ ಸಹಜವಾಗಿ ರೈತರು ಆಕ್ರೋಶಿತಗೊಂಡಿದ್ದರು.


ಈಗ ಮತ್ತೇ ಯಾವುದೇ ಅನುಮತಿ ಇಲ್ಲದೇಬೋರವೆಲ್ ಕೊರೆಯಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈಗ ರೈತರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಅಗತ್ಯಬಿದ್ದರೆ ಕೋರ್ಟ ಮೆಟ್ಟಿಲು ಸಹ ಹತ್ತುವ ಚಿಂತನೆ ನಡೆಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version