ದಾವಣಗೆರೆ: ಎಲ್ಲಾ ಹಿಂದೂಗಳನ್ನು ಸಾಯಿಸಲೆಂದು ನನ್ನನ್ನು ಆಪಘಾನಿಸ್ಥಾನದಿಂದ ಕಳಿಸಿದ್ದಾರೆ. ನಾನು ಟೆರರಿಸ್ಟ್. ಎಲ್ಲಾ ಹಿಂದೂಗಳನ್ನು ಹೊಡೆಯಲು ಬಂದಿದ್ದೇನೆಂದು ಜನರ ಭಾವನೆಗೆ ಧಕ್ಕೆ ತರುವಂತೆ ಹೇಳಿಕೆ ನೀಡುತ್ತಾ, ವಿಚಿತ್ರ ವರ್ತನೆ ತೋರುತ್ತಿದ್ದ ಶಿವಮೊಗ್ಗ ಮೂಲದ ಅನ್ಯ ಕೋಮಿನ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಚನ್ನಗಿರಿ ತಾ. ಅರಿಶಿನಘಟ್ಟ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ವಾಸಿ ಎನ್ನಲಾದ ಮೊಹಮ್ಮದ್ ಖಾಲಿದ್ ಎಂಬ ವ್ಯಕ್ತಿಯೆಂದು ಆತನನ್ನು ಗುರುತಿಸಲಾಗಿದೆ. ನಾನು ಹೊಡೆಯೋಕೆ ಬಂದಿರೋದು ಎಲ್ಲಾ ಹಿಂದೂಸ್‌ಗಳಿಗೆ. ಮುಸಲ್ಮಾನ್ ಮಾಡೇ ಮಾಡುತ್ತೇನೆ ಎಂದು ವಿಚಿತ್ರವಾಗಿ ನೀಡಿರುವ ಹೇಳಿಕೆಗಳ ವೀಡಿಯೋವನ್ನು ಅಲ್ಲಿನ ಸ್ಥಳೀಯರು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈಗ ನಾನು ಶಿವಮೊಗ್ಗ ಹೋಗ್ತಾ ಇದ್ದೇನೆ ಈಗ. ಯಾರು ನೀನು ಕೇಳೋಕೆ? ನೀನ್ಯಾಕೆ ಕೇಳ್ತಾ ಇದ್ದೀಯಾ? ಹರಾಮಿ ಹಿಂದೂಗಳ ಜೊತೆಗೆ ಬೆಳಿಗ್ಗೆ ಬೆಳಿಗ್ಗೆನೇ ಅಂತೆಲ್ಲಾ ಆತ ಬಡ ಬಡಾಯಿಸುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಅನ್ಯ ಕೋಮಿಗೆ ಧಕ್ಕೆ ತರುವಂತಹ ಮಾತನಾಡಿ, ಆತಂಕ ಸೃಷ್ಟಿಸಿದ ಅಪರಿಚಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು, ಪೊಲೀಸರ ವಶಕ್ಕೆ ನೀಡಿದ್ದಾರೆ. ಆಗಲೂ ಸಹ ಆತ ಬಡಬಡಾಯಿಸಿದ್ದಾನೆ.
ಹಿಂದೂ ದೇವಾಲಯ, ಆರೆಸ್ಸೆಸ್ ಅಂತೆಲ್ಲಾ ಮಾತಾಡುತ್ತಿದ್ದ ಈ ವ್ಯಕ್ತಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆತ ಶಿವಮೊಗ್ಗದ ವಾಸಿ, ಮೊಹಮ್ಮದ್ ಖಾಲಿದ್ ಎಂಬ ವಿಚಾರ ಆ ವ್ಯಕ್ತಿ ಬಳಿ ಇದ್ದ ಆಧಾರ್ ಕಾರ್ಡ್‌ನಿಂದ ಸ್ಪಷ್ಟವಾಗಿದೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವ್ಯಕ್ತಿಯ ಮಾನಸಿಕ ಸ್ಥಿತಿ ಸರಿ ಇಲ್ಲವೆಂದು, ಆತನ ಬಂಧು-ಬಳಗ, ಕುಟುಂಬದವರು ಠಾಣೆಗೆ ಬಂದಿದ್ದಾರೆಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.