Home ನಮ್ಮ ಜಿಲ್ಲೆ ಬೆಂಗಳೂರು OYO ರೂಮ್ಸ್: ಬುಕಿಂಗ್‌ಗೂ ಮುನ್ನ ತಿಳಿದಿರಬೇಕಾದ ಅಚ್ಚರಿಯ ಸಂಗತಿಗಳು!

OYO ರೂಮ್ಸ್: ಬುಕಿಂಗ್‌ಗೂ ಮುನ್ನ ತಿಳಿದಿರಬೇಕಾದ ಅಚ್ಚರಿಯ ಸಂಗತಿಗಳು!

0

OYO ರೂಮ್ಸ್ ಈ ಹೆಸರು ಕೇಳದವರು ವಿರಳ. ಇತ್ತೀಚಿನ ದಿನಗಳಲ್ಲಿ ಇದರ ಜನಪ್ರಿಯತೆ ಗಗನಕ್ಕೇರಿದೆ. ಕಡಿಮೆ ದರದಲ್ಲಿ ಉತ್ತಮ ಕೊಠಡಿಗಳನ್ನು ಒದಗಿಸುವ ಓಯೋ, ಪ್ರವಾಸಿಗರಿಗೆ ಮತ್ತು ದೂರದ ಊರುಗಳಿಂದ ಬರುವವರಿಗೆ ವರದಾನವಾಗಿದೆ. ಆದರೆ ಇದರ ಬಳಕೆಯಲ್ಲಿ ಕೆಲವೊಮ್ಮೆ ಗೊಂದಲಗಳು ಉಂಟಾಗುವುದು ಸಹಜ.

ವಿಶೇಷವಾಗಿ ಪ್ರೇಮಿಗಳು ಅಥವಾ ಅವಿವಾಹಿತ ದಂಪತಿಗಳಿಗೆ ಓಯೋ ಕೊಠಡಿಗಳ ಕುರಿತು ಹಲವು ಪ್ರಶ್ನೆಗಳಿರುವುದುಂಟು. ಇದೀಗ ಓಯೋ ಬುಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿದ್ದು, ಇವುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಮೊದಲಿಗೆ ಓಯೋದಲ್ಲಿ ರೂಮ್ ಬುಕ್ ಮಾಡುವ ಮೊದಲು, ಆ ಹೋಟೆಲ್‌ನ ನಿರ್ದಿಷ್ಟ ನಿಯಮಗಳನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಕೆಲವು ಪ್ರದೇಶಗಳಲ್ಲಿನ ಹೋಟೆಲ್‌ಗಳು ಅವಿವಾಹಿತ ದಂಪತಿಗಳಿಗೆ ರೂಮ್ ನೀಡದಿರಬಹುದು. ಹಾಗಾಗಿ ಬುಕಿಂಗ್ ಮಾಡುವಾಗ ಈ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ.

ಎರಡನೆಯದಾಗಿ, ಚೆಕ್-ಇನ್ ಸಮಯದಲ್ಲಿ ಗುರುತಿನ ಚೀಟಿ ಕಡ್ಡಾಯ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಸರ್ಕಾರದಿಂದ ಮಾನ್ಯತೆ ಪಡೆದ ಐಡಿ ಕಾರ್ಡ್‌ಗಳನ್ನು (ಉದಾಹರಣೆಗೆ ಆಧಾರ್ ಕಾರ್ಡ್) ತೋರಿಸಬೇಕಾಗುತ್ತದೆ. ಕೆಲವು ಹೋಟೆಲ್‌ಗಳು ವಿವಾಹಿತ ದಂಪತಿಗಳಿಗೆ ಮದುವೆ ಪ್ರಮಾಣಪತ್ರ ಅಥವಾ ಜಂಟಿ ಐಡಿ ಕೇಳುವ ಸಾಧ್ಯತೆಯೂ ಇರುತ್ತದೆ.

ಇನ್ನ ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಹಳ ಮುಖ್ಯ. ಹೋಟೆಲ್‌ಗಳಲ್ಲಿ ಚೆಕ್-ಇನ್ ಸಮಯದಲ್ಲಿ ನಾವು ನಮ್ಮ ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿಗಳನ್ನು ನೀಡಬೇಕಾಗುತ್ತದೆ. ಈ ದಾಖಲೆಗಳಲ್ಲಿ ನಮ್ಮ ಸಂಪೂರ್ಣ ಮಾಹಿತಿ ಇರುವುದರಿಂದ ದುರುಪಯೋಗವಾಗುವ ಸಾಧ್ಯತೆ ಇದೆ.

ಇದನ್ನು ತಪ್ಪಿಸಲು ಒಂದು ಉತ್ತಮ ಉಪಾಯವೆಂದರೆ ‘ಮಾಸ್ಕ್ಡ್ ಆಧಾರ್ ಕಾರ್ಡ್’ ಬಳಸುವುದು. ಮಾಸ್ಕ್ಡ್ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಮಾತ್ರ ಗೋಚರಿಸುತ್ತವೆ, ಉಳಿದ ಅಂಕಿಗಳು ‘XXXX’ ಎಂದು ನಮೂದಾಗಿರುತ್ತವೆ. ಈ ಕಾರ್ಡ್ ಅನ್ನು ಓಯೋ ಸೇರಿದಂತೆ ಎಲ್ಲಾ ಹೋಟೆಲ್‌ಗಳು ಮಾನ್ಯ ಮಾಡುತ್ತವೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು.

ಪಾವತಿ ವಿಧಾನಗಳ ಬಗ್ಗೆಯೂ ಗಮನಹರಿಸುವುದು ಉತ್ತಮ. ಕೆಲವು ಹೋಟೆಲ್‌ಗಳು ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸದೇ ಇರಬಹುದು, ಕೇವಲ ನಗದು ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಾವತಿಗೆ ಅವಕಾಶ ನೀಡಬಹುದು.

ಆದ್ದರಿಂದ, ಬುಕಿಂಗ್ ಮಾಡುವಾಗಲೇ ಪಾವತಿ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಓಯೋ ರೂಮ್‌ಗಳನ್ನು ಬುಕ್ ಮಾಡುವಾಗ ಈ ಸರಳ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡರೆ, ನೀವು ಯಾವುದೇ ತೊಂದರೆಯಿಲ್ಲದೆ ಆರಾಮದಾಯಕ ವಾಸ್ತವ್ಯವನ್ನು ಆನಂದಿಸಬಹುದು.

NO COMMENTS

LEAVE A REPLY

Please enter your comment!
Please enter your name here

Exit mobile version