Home ಸುದ್ದಿ ವಿದೇಶ ಭೌತಶಾಸ್ತ್ರಜ್ಞ ನೊಬೆಲ್ ವಿಜೇತ ಚೆನ್ ನಿಂಗ್ ಯಾಂಗ್ ನಿಧನ

ಭೌತಶಾಸ್ತ್ರಜ್ಞ ನೊಬೆಲ್ ವಿಜೇತ ಚೆನ್ ನಿಂಗ್ ಯಾಂಗ್ ನಿಧನ

0

ಬೀಜಿಂಗ್: ಚೀನಾದ ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಚೆನ್ ನಿಂಗ್ ಯಾಂಗ್ ಇಂದು 103 ವರ್ಷದ ಆಯುಷ್ಯದಲ್ಲಿ ನಿಧನರಾದರು. ಅವರು 1922ರ ಸೆಪ್ಟೆಂಬರ್ 22ರಂದು ಪೂರ್ವ ಚೀನಾದ ಅನ್ಸುಯಿ ಪ್ರಾಂತ್ಯದ ಹಫೆಟ್‌ನಲ್ಲಿ ಜನಿಸಿದರು.

1940ರ ದಶಕದಲ್ಲಿ ಯಾಂಗ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು ಮತ್ತು ಬಳಿಕ ಹಲವಾರು ಪ್ರಮುಖ ಶೈಕ್ಷಣಿಕ ಹಾಗೂ ಸಂಶೋಧನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಯಾಂಗ್ ತಮ್ಮ ಸಂಶೋಧನೆಗಳಲ್ಲಿ 1954ರಲ್ಲಿ ಅಮೆರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಮಿಲ್ಸ್ ಅವರೊಂದಿಗೆ ಸಮೀಕರಣಗಳ ಗುಂಪನ್ನು ರಚಿಸಿದ್ದರು. ಈ ಸಮೀಕರಣಗಳು ಸಾಪೇಕ್ಷತಾ ಸಿದ್ಧಾಂತದಂತೆ ಭೌತಶಾಸ್ತ್ರಕ್ಕೆ ಅತಿ ಮುಖ್ಯವಾದದ್ದಾಗಿದ್ದವು.

ಸಾಮಾನ್ಯ ಭೌತಶಾಸ್ತ್ರ ನಿಯಮಗಳು ಬಿಂಬ ಮತ್ತು ಪ್ರತಿಬಿಂಬಗಳೆರಡಿನಲ್ಲಿ ಒಂದೇ ರೀತಿಯಂತಿರುತ್ತವೆ ಮತ್ತು ಕಾರ್ಯ ಸ್ವರೂಪತೆ ಸಂರಕ್ಷಿತವಾಗಿರುತ್ತದೆ ಎಂದು ನಂಬಲಾಗುತ್ತಿತ್ತು. ಆದರೆ ಕ್ಷೀಣ ಬೈಜಿಕ್ ಕ್ರಿಯೆಗಳಲ್ಲಿ ಈ ಸಾಮ್ಯತೆ ನಿರ್ವಹಿಸಲಾಗುವುದಿಲ್ಲ ಎಂದು ಯಾಂಗ್ ಅವರ ಸಂಶೋಧನೆ ತೋರಿಸಿತು.

1956ರಲ್ಲಿ ಯಾಂಗ್ ಹಾಗೂ ಸಾಂಗ್ ಡಿ ಲೀ ತಮ್ಮ ಸಂಶೋಧನೆಗಳಲ್ಲಿ ಕ್ಷೀಣ ಬೈಜಿಕ್ ಬಲಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂಬ ಮುನ್ಸೂಚನೆ ನೀಡಿದರು. ಇದರ ಆಧಾರದ ಮೇಲೆ 1957ರಲ್ಲಿ ಯಾಂಗ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚೆನ್ ನಿಂಗ್ ಯಾಂಗ್ ಅವರು ಭೌತಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ ಶ್ರೇಷ್ಠ ವಿಜ್ಞಾನಿ. ಅವರ ನಿಧನವು ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯಕ್ಕೆ ಭಾರಿ ನಷ್ಟವಾಗಿದೆ.

ಅವರು ತಮ್ಮ ಜೀವನದ 103 ವರ್ಷಗಳಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ದಾಖಲಿಸಿಕೊಂಡು, ಭೌತಶಾಸ್ತ್ರದ ಪರಿಪೂರ್ಣತೆಯನ್ನು ಮುಂದುವರಿಸಿಕೊಂಡರು.

NO COMMENTS

LEAVE A REPLY

Please enter your comment!
Please enter your name here

Exit mobile version