Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ರೈಲು

ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ರೈಲು

0

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ರೈಲು ಸೇವೆಗಳನ್ನು ಪ್ರಕಟಿಸಿದೆ. ಈ ಸೇವೆಗಳು ಅಕ್ಟೋಬರ್ 18 ರಿಂದ 22 ರವರೆಗೆ ಲಭ್ಯವಿರುತ್ತವೆ.

ದಿನಾಂಕ ಅಕ್ಟೋಬರ್ 18 ರಂದು ಬೆಂಗಳೂರು ಕಂಟೋನ್ಮೆಂಟ್‌ನಿಂದ ಕಲಬುರಗಿಗೆ ಹೊರಡುವ ರೈಲು ಸಂಖ್ಯೆ 06203, ಸಾಯಂಕಾಲ 7:40 ಕ್ಕೆ ಹೊರಟು ಮರುದಿನ ಬೆಳಗ್ಗೆ 7:30 ಕ್ಕೆ ಕಲಬುರಗಿ ತಲುಪಲಿದೆ.

ದಿನಾಂಕ ಅಕ್ಟೋಬರ್ 19 ರಂದು ಕಲಬುರಗಿಯಿಂದ ಯಶವಂತಪುರಕ್ಕೆ ಹೊರಡುವ ರೈಲು ಸಂಖ್ಯೆ 06204, ಬೆಳಗ್ಗೆ 9:35 ಕ್ಕೆ ಹೊರಟು ರಾತ್ರಿ 8:30 ಕ್ಕೆ ತಲುಪಲಿದೆ.

ಇದಲ್ಲದೆ, ಬೆಂಗಳೂರು ಕಂಟೋನ್ಮೆಂಟ್‌ನಿಂದ ಕಲಬುರಗಿಗೆ ಒಂದು ವಿಶೇಷ ರೈಲು ಸಂಖ್ಯೆ 06207 ಅಕ್ಟೋಬರ್ 20 ರಂದು ರಾತ್ರಿ 7:40 ಕ್ಕೆ ಹೊರಟು ಮರುದಿನ ಬೆಳಗ್ಗೆ 7:30 ಕ್ಕೆ ತಲುಪಲಿದೆ.

ಕಲಬುರಗಿಯಿಂದ ಬೆಂಗಳೂರು ಕಂಟೋನ್ಮೆಂಟ್‌ನಿಂದ ಅ.21 ರಂದು ಹೊರಡುವ ರೈಲು ಸಂಖ್ಯೆ 06208 ಬೆಳಗ್ಗೆ 9:35 ಕ್ಕೆ ಹೊರಟು ರಾತ್ರಿ 8:30 ಕ್ಕೆ ಬೆಂಗಳೂರು ತಲುಪಲಿದೆ.

ವಿಶೇಷ ರೈಲು ಸಂಖ್ಯೆ 06209 ಅಕ್ಟೋಬರ್ 21 ರಂದು ರಾತ್ರಿ 10:10 ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಹೊರಟು ಮರುದಿನ ಬೆಳಗ್ಗೆ 9:00 ಗಂಟೆಗೆ ತಲುಪಲಿದೆ. ಅಂತಿಮವಾಗಿ, ಕಲಬುರಗಿಯಿಂದ ಅಕ್ಟೋಬರ್ 22 ರಂದು ಹೊರಡುವ ರೈಲು ಸಂಖ್ಯೆ 06210, ಬೆಳಗ್ಗೆ 10:45 ಕ್ಕೆ ಹೊರಟು ರಾತ್ರಿ 10:30 ಕ್ಕೆ ಬೆಂಗಳೂರು ತಲುಪಲಿದೆ.

ಈ ವಿಶೇಷ ರೈಲು ಸೇವೆಗಳು ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖವಾಗಿವೆ. ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಅಥವಾ NTES ಆ್ಯಪ್ ಮೂಲಕ ಅಥವಾ 139 ಗೆ ಕರೆ ಮಾಡಿ.

NO COMMENTS

LEAVE A REPLY

Please enter your comment!
Please enter your name here

Exit mobile version