Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಸರಾ ಗೊಂಬೆಗಳ ದರ್ಬಾರ್

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಸರಾ ಗೊಂಬೆಗಳ ದರ್ಬಾರ್

0

ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ. ದಸರಾ ಸಂದರ್ಭದಲ್ಲಿ ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಕಣ್ಮನ ಸೆಳೆಯುತ್ತಿರುವ ಏರ್‌ಪೋರ್ಟ್‌ನ ದಸರಾ ಗೊಂಬೆಗಳು ಪ್ರದರ್ಶನ ಎಲ್ಲರನ್ನೂ ಆಕರ್ಷಿಸುತ್ತಿದೆ.

ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಗೊಂಬೆಗಳ ದರ್ಬಾರ್ ನಡೆಯುತ್ತಿದೆ. ವಿಮಾನ ನಿಲ್ದಾಣದ ಒಳಗೆ ಎಲ್ಲರ ಗಮನ ಸೆಳೆಯುತ್ತಿರುವ ದಸರಾ ಗೊಂಬೆಗಳ ಚಿತ್ರಗಳು ವೈರಲ್ ಆಗುತ್ತಿವೆ. ದೇಶ-ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರಿಗೆ ದಸರಾ ಗೊಂಬೆಗಳ ವಿಶಿಷ್ಟತೆಯನ್ನು ತಿಳಿದುಕೊಳ್ಳಲು ಇದು ಸಹಕರಿಯಾಗಿದೆ.

ದಸರಾ ವೈಭವ ವಿಮಾನ ನಿಲ್ದಾಣದಲ್ಲೂ ಕಳೆ ಕಟ್ಟಿದೆ. ವಿಮಾನ ನಿಲ್ದಾಣ ಪ್ರಯಾಣಿಕರನ್ನು ರಂಜಿಸಲಾಗುತ್ತಿದೆ. ಅದರಲ್ಲೂ ನಾಡಿನ ಪರಂಪರೆ ಬಿತ್ತುವ ಡೊಳ್ಳು ಕುಣಿತ ಪ್ರತಿದಿನ ದೇಶ ವಿದೇಶ ಪ್ರಯಾಣಿಕರನ್ನು ರಂಜಿಸುತ್ತಿದೆ. ವಿಮಾನ ನಿಲ್ದಾಣದಲ್ಲಿ ದೇಶೀ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ನಡೆಯಿತು. ಡೊಳ್ಳು ಕುಣಿತ ಹಾಗೂ ಗಾರುಡಿ ಕುಣಿತಕ್ಕೆ ಪ್ರಯಾಣಿಕರ ಗಮನ ಸೆಳೆಯಿತು.

ದಸರಾ ಹಬ್ಬ ಬಂದರೆ ಮನೆಗಳಲ್ಲಿ ಬೊಂಬೆಗಳನ್ನು ಕೂಡಿಸಿ ಪೂಜೆ ಮಾಡುತ್ತಾರೆ. ಶಾಲೆ ಮತ್ತು ಮನೆಗಳಲ್ಲಿ ನೋಡುತ್ತಿದ್ದ ಗೊಂಬೆಗಳನ್ನು ಇದೀಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕಣ್ಮನ ಸೆಳೆಯುವಂತೆ ಕೂರಿಸಲಾಗಿದೆ. ನಮ್ಮ ನಾಡಿನ ಹಾಗೂ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಡುತ್ತಿದೆ.

ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸವಾಗುತ್ತಿದೆ. ವಿಶಿಷ್ಟ ರೀತಿಯ ಗೊಂಬೆಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ದಸರಾ ಹಬ್ಬದ ವೈಭವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ದೇಶ ವಿದೇಶ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ದಸರಾ ಗೊಂಬೆಗಳ ದರ್ಬಾರ್ ಮಾತ್ರ ವಿದೇಶಿ ಪ್ರಯಾಣಿಕರ ಸೆಲ್ಫೀ ತೆಗೆದುಕೊಳ್ಳುವಂತೆ ಮಾಡಿದೆ.

ಏರ್‌ಪೋರ್ಟ್‌ನಲ್ಲಿ ದಸರಾ ಬೊಂಬೆಗಳು : ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು. ನವರಾತ್ರಿ ಅಂಗವಾಗಿ 10 ದಿನಗಳ ದಸರಾ ಆಚರಣೆಯನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ ಟರ್ಮಿನಲ್-2ನಲ್ಲಿ ಗೊಂಬೆಗಳನ್ನು ಕೂರಿಸಲಾಗಿದೆ.

ಅದರಲ್ಲಿ ಚಾಮುಂಡೇಶ್ವರಿ, ಶ್ರೀಕೃಷ್ಣ, ಆಂಜನೇಯ, ಸೇರಿದಂತೆ ಅನೇಕ ದೇವರ ಗೊಂಬೆಗಳು, ಜತೆಗೆ ರಾಜ ಮಹಾರಾಜರು ಹಾಗೂ ಡಾ. ಅಬ್ದುಲ್ ಕಲಾಂ, ಅವರು ವಿದ್ಯಾರ್ಥಿಗಳಿಗೆ ಭೋದಿಸುತ್ತಿರುವ ಗೊಂಬೆ ನಯನ ಮನೋಹರವಾಗಿದೆ. ಈ ಗೊಂಬೆಗಳನ್ನು ವಿದೇಶಿ ಪ್ರಯಾಣಿಕರು, ಸ್ಥಳೀಯರು, ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸುತ್ತಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂಬೆಗಳನ್ನು ಕೂರಿಸಿರುವುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ರೀತಿ ಇದೆ. ಪ್ರತಿ ದಿನ ದಸರಾ ಹಿನ್ನೆಲೆಯಲ್ಲಿ ವಿಮಾನದ ಸಿಬ್ಬಂದಿಯಿಂದಲೇ ಮನೋರಂಜನ ಕಾರ್ಯಕ್ರಮ ನೀಡಲಾಗುತ್ತಿದೆ.

“ದಸರಾ ಅಂದರೆ ಮೈಸೂರು ನೆನಪಾಗುತ್ತದೆ. ನಮ್ಮ ಯುವ ಪೀಳಿಗೆ ದಸರಾ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು” ಎಂದು ಸುಮತಿ ವಿಮಾನ ನಿಲ್ದಾಣ ಪ್ರಯಾಣಿಕರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version