Home ನಮ್ಮ ಜಿಲ್ಲೆ ಬೆಂಗಳೂರು Namma Metro: ಅಕ್ಟೋಬರ್ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ 5ನೇ ರೈಲು ಸಂಚಾರ

Namma Metro: ಅಕ್ಟೋಬರ್ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ 5ನೇ ರೈಲು ಸಂಚಾರ

0

Namma Metro ಹಳದಿ ಮಾರ್ಗದಲ್ಲಿ ಆಗಸ್ಟ್ 11ರಿಂದ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಮಾರ್ಗದಲ್ಲಿ ಸದ್ಯ 4 ರೈಲುಗಳು ಸಂಚಾರವನ್ನು ನಡೆಸುತ್ತಿದೆ.

ಪಶ್ಚಿಮ ಬಂಗಾಳದಿಂದ ಹೊರಟಿದ್ದ 5ನೇ ರೈಲಿನ 6 ಬೋಗಿಗಳು ಈಗ ಬೆಂಗಳೂರು ನಗರಕ್ಕೆ ಆಗಮಿಸಿವೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್ ಹಿರಿಯ ಅಧಿಕಾರಿಗಳೊಂದಿಗೆ ಹೆಬ್ಬಗೋಡಿ ಡಿಪೋಕ್ಕೆ ಸೆಪ್ಟೆಂಬರ್ 30ರಂದು ಆಗಮಿಸಿದ 5ನೇ ರೈಲು ಸೆಟ್ ಪರಿಶೀಲಿಸಿದರು.

ಈ ರೈಲುಗಳನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಆದ್ಯತೆಯ ಮೇಲೆ ಸೇರ್ಪಡೆಗೊಳಿಸಲು ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು. ಕಡ್ಡಾಯ ಪರೀಕ್ಷೆ ಮತ್ತು ಸೇವಾ ಪ್ರಯೋಗಗಳ ನಂತರ ರೈಲನ್ನು ಸೇವೆಗೆ ಸೇರಿಸಲಾಗುತ್ತದೆ, ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯನ್ನು 15 ನಿಮಿಷಗಳಿಗೆ ಕಡಿಮೆ ಮಾಡಲು ಸಹಾಯಕವಾಗಲಿದೆ.

4 ರೈಲುಗಳ ಸಂಚಾರ: ಆಗಸ್ಟ್‌ 11ರಿಂದ ಹಳದಿ ಮಾರ್ಗದಲ್ಲಿ 3 ರೈಲುಗಳು ಸಂಚಾರವನ್ನು ನಡೆಸುತ್ತಿದ್ದವು. ಸೆಪ್ಟೆಂಬರ್ 10ರಂದು 4ನೇ ರೈಲು ಕಾರ್ಯಾಚರಣೆಯನ್ನು ಆರಂಭಿಸಿತ್ತು. ಪ್ರಸ್ತುತ ಹಳದಿ ಮಾರ್ಗದಲ್ಲಿ ಪ್ರತಿದಿನ ಸುಮಾರು 80,000 ಪ್ರಯಾಣಿಕರು ಸಂಚಾರವನ್ನು ನಡೆಸುತ್ತಿದ್ದಾರೆ.

ಮೂರು ರೈಲು ಸಂಚಾರ ನಡೆಸುವಾಗ ರೈಲು ಸಂಚಾರದ ಅವಧಿ 25 ನಿಮಿಷವಿತ್ತು. 4ನೇ ರೈಲು ಸೇರಿದ ಬಳಿಕ ಎಲ್ಲಾ ದಿನಗಳಲ್ಲಿ ರೈಲುಗಳು 19 ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸುತ್ತಿವೆ. ಸದ್ಯ ಸೋಮವಾರದಿಂದ ಶನಿವಾರದವರೆಗೆ ಮೊದಲ ವಾಣಿಜ್ಯ ಸೇವೆ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಆರ್‌.ವಿ.ರಸ್ತೆ-ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಹಳದಿ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ಇದು ನಗರದ ಬಹು ಬೇಡಿಕೆಯ ಮಾರ್ಗವಾಗಿದೆ. ಅಲ್ಲದೇ ಟೆಕ್ಕಿಗಳು ಹೆಚ್ಚಾಗಿ ಈ ಮಾರ್ಗವನ್ನು ಬಳಕೆ ಮಾಡುತ್ತಿದ್ದಾರೆ.

ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಮಾರ್ಗ 19 ಕಿ.ಮೀ. ಇದೆ. ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ನಗರದಲ್ಲಿ ಮೊದಲ ಡಬಲ್ ಡೆಕ್ಕರ್ ಸೇತುವೆ ಮೇಲೆ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತದೆ.

ಈ ರೈಲು ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ಟೆಕ್ಕಿಗಳಿಗೆ ಅನುಕೂಲವಾಗಿದೆ. ಅಲ್ಲದೇ ರೈಲು ಸಂಚಾರ ಆರಂಭವಾದ ಬಳಿಕ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರ ಸಮೀಕ್ಷೆ ಹೇಳಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version