Home ನಮ್ಮ ಜಿಲ್ಲೆ ಬೆಂಗಳೂರು ಗ್ರೇಟರ್ ಬೆಂಗಳೂರು ಆದ ಬಿಬಿಎಂಪಿ, ವಾರ್ಡ್‌ಗಳಿಗೆ ಹೊಸ ಹೆಸರುಗಳು

ಗ್ರೇಟರ್ ಬೆಂಗಳೂರು ಆದ ಬಿಬಿಎಂಪಿ, ವಾರ್ಡ್‌ಗಳಿಗೆ ಹೊಸ ಹೆಸರುಗಳು

0

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಗ್ರೇಟರ್ ಬೆಂಗಳೂರು ಆಗಿ ಬದಲಾಗುತ್ತಿದ್ದಂತೆ ಸಾಹಿತಿ, ಮಾಜಿ ರಾಷ್ಟ್ರಪತಿ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಿನಿ ನಟರ, ಸಾಧಕರ ಹೆಸರುಗಳನ್ನು ವಾರ್ಡ್‌ಗಳಿಗೆ ಇಡಲಾಗಿದೆ.

ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಸಾಹಿತಿ ಡಿ.ವಿ.ಗುಂಡಪ್ಪ, ದಕ್ಷಿಣ ನಗರ ಪಾಲಿಕೆಯ ಕುಮಾರಸ್ವಾಮಿ ಲೇಔಟ್ 2ನೇ ಹಂತದ ಪ್ರದೇಶ ಒಳಗೊಂಡಿರುವ ವಾರ್ಡ್‌ಗೆ ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್‌ ಹಾಗೂ ಜಯನಗರ ಟಿ ಬ್ಲಾಕ್ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹೆಸರಿಡಲಾಗಿದೆ.

ಲಗ್ಗೆರೆ ಪ್ರದೇಶದ ವಾರ್ಡ್‌ಗೆ ಫ್ರೀಡಂಫೈಟರ್ ವಾರ್ಡ್ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ.ಬ್ಲಾಕ್ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ಡಾ.ರಾಜ್‌ಕುಮಾರ್ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ಸ್ವಾಮಿ ವಿವೇಕಾನಂದ ಎಂದು ಹೆಸರಿಡಲಾಗಿದೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೋನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಝಾನ್ಸಿ ರಾಣಿ, ಮಂಗಲ್‌ಪಾಂಡೆ, ಸಂಗೊಳ್ಳಿ ರಾಯಣ್ಣ ಎಂದು
ಹೆಸರಿಡಲಾಗಿದೆ.

ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸ ಕೃಷ್ಣದೇವರಾಯ, ಕಂಠೀರವ ಸ್ಟುಡಿಯೋ ವ್ಯಾಪ್ತಿಯ ವಾರ್ಡ್‌ಗೆ ನಟ ಡಾ. ಪುನೀತ್ ರಾಜ್‌ಕುಮಾರ್, ದಾಸರಹಳ್ಳಿ-ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ನಾಡಪ್ರಭು ಕೆಂಪೇಗೌಡನಗರ, ನಂದಿನಿ ಲೇಔಟ್ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ಕಿತ್ತೂರು ರಾಣಿ ಚನ್ನಮ್ಮ ಎಂದು ಹೆಸರಿಡಲಾಗಿದೆ.

ವಾರ್ಡ್‌ಗಳಿಗೆ ಪ್ರಮುಖರ ಹೆಸರು

  • ಉತ್ತರ ನಗರ ಪಾಲಿಕೆ: ಹಿದಾಯತ್‌ನಗರಕ್ಕೆ ‘ಸಮಧಾನನಗರ’, ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್‌ಗೆ ಶಿಕ್ಷಣ ತಜ್ಞೆ ಆರುಣಾ ಆಸೀಫ್ ಅಲಿ, ದೇವರಜೀವನಹಳ್ಳಿಗೆ ‘ದೊಡ್ಡಣ್ಣನಗರ’.
  • ದಕ್ಷಿಣ ನಗರ ಪಾಲಿಕೆ: ಚಿಕ್ಕಲಸಂದ್ರ ಪ್ರದೇಶಕ್ಕೆ ‘ಸಾರ್ವಭೌಮನಗರ’, ಕೋರಮಂಗಲ 6ನೇ ಬ್ಲಾಕ್ ಸಾಮಾಜಿಕ ಹೋರಾಟಗಾರರಾದ ‘ಆನಿಬೆಸೆಂಟ್, ಬಿಟಿಎಂ ಲೇಔಟ್ 1ನೇ ಹಂತಕ್ಕೆ ವಿಶ್ವಮಾನವ ‘ಕುವೆಂಪು’, ಬೊಮ್ಮನಹಳ್ಳಿಯ ಕೆ.ಆರ್.ಲೇಔಟ್‌ಗೆ ‘ಕೆಂಗಲ್ ಹನುಮಂತಯ್ಯ.
  • ಪೂರ್ವ ನಗರ ಪಾಲಿಕೆ: ಕೊಟ್ಟೂರು-ದರ್ಗಾ ಮೊಹಲ್ಲಾಗೆ ಕವಿ ಕೆ.ಎಸ್.ನಿಸಾರ್ ಅಹ್ಮದ್, ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ವಿಜ್ಞಾನನಗರಕ್ಕೆ ‘ತಲಕಾವೇರಿ’ ಎಂದು ಹೆಸರಿಡಲಾಗಿದೆ.
  • ಕೇಂದ್ರ ನಗರ ಪಾಲಿಕೆ: ಇಟ್ಟಿಗೆ ಆಂಜನಪ್ಪ ಲೇನ್, ಚೌಡಪ್ಪ ರಸ್ತೆಗೆ ‘ಐಡಿಪಿ ಸಾಲಪ್ಪ, ಮಂಜುನಾಥ್ ನಗರ ಬಿ.ಬ್ಲಾಕ್, ಗಾಂಧಿನಗರ ಪ್ರದೇಶಕ್ಕೆ ‘ಸುಭಾಷ್‌ಶ್ಚಂದ್ರ ಬೋಸ್’ ಎಂದು ಹೆಸರಿಡಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version