ಈ ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಚಿನ್ನದ ಬೆಲೆ ತುಸು ದುಬಾರಿಯಾಗಿಯೇ ಕಾಣುತ್ತಿದೆ. ಸದ್ಯ ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವ ಕಾರಣ, ಚಿನ್ನದ ಮೇಲೆ ಹೂಡಿಕೆ ಮಾಡಲು ಅಥವಾ ಆಭರಣಗಳನ್ನು ಖರೀದಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದವರಿಗೆ ಇದು ಮಿಶ್ರ ಭಾವನೆಗಳನ್ನು ತರುತ್ತಿದೆ.
ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಏರಿಕೆ ಕಾಣುತ್ತಿದ್ದು, ಹಬ್ಬದ ಸಡಗರದ ನಡುವೆಯೂ ಗ್ರಾಹಕರು ಚಿನ್ನದ ಮಾರುಕಟ್ಟೆಯತ್ತ ತೀವ್ರ ಆಸಕ್ತಿಯಿಂದ ನೋಡುತ್ತಿದ್ದಾರೆ.
ಇಂದಿನ ಚಿನ್ನದ ದರಗಳು (ಅಕ್ಟೋಬರ್ 17): ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರಗಳನ್ನು ಗಮನಿಸಿದರೆ, ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ.13,277 ರಷ್ಟಿದೆ. ನಿನ್ನೆಗೆ ಹೋಲಿಸಿದರೆ ಇದು ರೂ.333ರಷ್ಟು ಏರಿಕೆ ಕಂಡಿದೆ. ಅಂತೆಯೇ, 8 ಗ್ರಾಂ ಚಿನ್ನದ ಬೆಲೆ ರೂ.1,06,216 ಆಗಿದ್ದು, 10 ಗ್ರಾಂ ಚಿನ್ನಕ್ಕೆ ರೂ.1,32,770 ತಲುಪಿದೆ. 100 ಗ್ರಾಂ ಚಿನ್ನದ ಬೆಲೆ ರೂ.13,27,700 ಆಗಿದ್ದು, ಇದು ಒಟ್ಟಾರೆ ರೂ.33,300ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ.12,170 ಆಗಿದ್ದು, ನಿನ್ನೆಗೆ ಹೋಲಿಸಿದರೆ ರೂ.305ರಷ್ಟು ಏರಿದೆ. 8 ಗ್ರಾಂ ಚಿನ್ನದ ಬೆಲೆ ರೂ.97,360 ಆಗಿದ್ದು, 10 ಗ್ರಾಂಗೆ ರೂ.1,21,700 ರಷ್ಟಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.12,17 ಸಾವಿರ ಆಗಿದ್ದು, ಇದು ರೂ.30,500ರಷ್ಟು ಏರಿಕೆ ಕಂಡಿದೆ.
18 ಕ್ಯಾರೆಟ್ ಚಿನ್ನದ ಬೆಲೆಯೂ ಏರಿಕೆ ಕಂಡಿದೆ. ಪ್ರತಿ ಗ್ರಾಂಗೆ ರೂ.9,958 ಆಗಿದ್ದು, ನಿನ್ನೆಯ ದರಕ್ಕಿಂತ ರೂ.250ರಷ್ಟು ಹೆಚ್ಚಾಗಿದೆ. 8 ಗ್ರಾಂ ಚಿನ್ನದ ಬೆಲೆ ರೂ.79,664, 10 ಗ್ರಾಂಗೆ ರೂ.99,580 ಹಾಗೂ 100 ಗ್ರಾಂ ಚಿನ್ನಕ್ಕೆ ರೂ.9,95,800 ತಲುಪಿದ್ದು, ಇದು ರೂ.25ಸಾವಿರ ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ: ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ನಡುವೆಯೂ ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ ಕಂಡುಬಂದಿರುವುದು ಖರೀದಿದಾರರಿಗೆ ಕೊಂಚ ನಿರಾಳತೆ ತಂದಿದೆ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ರೂ.193.90 ಆಗಿದ್ದು, ಪ್ರತಿ ಕಿಲೋಗ್ರಾಂಗೆ ರೂ. 1,93,900 ರಷ್ಟಿದೆ. ನಿನ್ನೆಗೆ ಹೋಲಿಸಿದರೆ ಕಿಲೋ ಬೆಳ್ಳಿ ದರದಲ್ಲಿ ರೂ. 100ರಷ್ಟು ಇಳಿಕೆಯಾಗಿದೆ. ದೀಪಾವಳಿಗೆ ಬೆಳ್ಳಿ ಖರೀದಿಸಿ ಪೂಜೆ ಮಾಡುವ ಸಂಪ್ರದಾಯ ಇರುವುದರಿಂದ ಬೆಳ್ಳಿ ದರಗಳು ಸಾಮಾನ್ಯವಾಗಿ ಏರುತ್ತಿದ್ದವು. ಆದರೆ ಈ ಅಲ್ಪ ಇಳಿಕೆ ಗ್ರಾಹಕರಿಗೆ ಸಂತಸ ತಂದಿದೆ.
ಪ್ಲಾಟಿನಂ ಬೆಲೆ ಏರಿಕೆ: ಪ್ಲಾಟಿನಂ ಬೆಲೆಯೂ ಏರಿಕೆ ಕಂಡಿದೆ. ಇಂದು ಪ್ರತಿ ಗ್ರಾಂ ಪ್ಲಾಟಿನಂ ಬೆಲೆ ರೂ. 4,820 ಆಗಿದ್ದು, 10 ಗ್ರಾಂಗೆ ರೂ. 48,200 ರಷ್ಟಿದೆ. ಇದು ಗ್ರಾಂ ಮೇಲೆ ರೂ.135ರಷ್ಟು ಏರಿಕೆ ಕಂಡಿದೆ.
ದೀಪಾವಳಿ ಹಬ್ಬದ ಸಡಗರದ ನಡುವೆಯೂ ಚಿನ್ನದ ಬೆಲೆ ಏರಿಕೆ ಕಾಣುತ್ತಿರುವುದು ಗ್ರಾಹಕರನ್ನು ಚಿಂತೆಗೆ ದೂಡಿದೆ. ಆದರೆ, ಹೂಡಿಕೆಯ ದೃಷ್ಟಿಯಿಂದ ಚಿನ್ನವು ಯಾವಾಗಲೂ ಉತ್ತಮ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. ಹೀಗಾಗಿ, ಹಬ್ಬದ ಸಂಭ್ರಮದಲ್ಲಿ ಚಿನ್ನ ಖರೀದಿಸಲು ಮುಂದಾಗುವವರು ಇಂದಿನ ದರಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು.