Home ನಮ್ಮ ಜಿಲ್ಲೆ ಅರಳಿ ಮರದಲ್ಲಿ ಹನುಮ ಪ್ರತ್ಯಕ್ಷ: ಹರಿದು ಬಂದ ಸಾವಿರಾರು ಜನ

ಅರಳಿ ಮರದಲ್ಲಿ ಹನುಮ ಪ್ರತ್ಯಕ್ಷ: ಹರಿದು ಬಂದ ಸಾವಿರಾರು ಜನ

0

ಬಾಗಲಕೋಟೆ: ಅರಳಿಮರ ದೇವರ ವಾಸಸ್ಥಾನವೆಂದು ಭಗವದ್ಗೀತೆ, ಸ್ಕಂದ ಪುರಾಣಗದಲ್ಲೂ ಉಲ್ಲೇಖವಿದೆ. ಈ ಅರಳಿ ಮರದ ಕಾಂಡದಲ್ಲಿ ಹನುಮನ ಚಿತ್ರ ಇಂದು ಪತ್ಯಕ್ಷವಾಗಿದೆ. ಈ ಚಿತ್ರ ಪ್ರತ್ಯಕ್ಷವಾಗಿದ್ದೆ ತಡ ಜನ ಸಾಗರವೇ ಇಲ್ಲಿ ಹರಿದು ಬರುತ್ತಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಹನುಮ ದೇವಾಲಯದಲ್ಲಿ ಇದ್ದ ಅರಳಿ ಮರದಲ್ಲಿ ರವಿವಾರ ಸಂಜೆ ಹನುಮನ ಚಿತ್ರ ಕಂಡು ಬಂದಿದೆ.

ನಡೆದಿದ್ದೇನು?
ದೇವಾಲಯ ಮುಂಭಾಗದಲ್ಲಿ ಜೀರ್ಣೋದ್ಧಾರ ಸಲುವಾಗಿ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಾಣ ಮಾಡುವಲ್ಲಿ ಸಮಿತಿ ಮುಂದಾಗಿತ್ತು. ಅದರಂತೆ ಅರಳಿ ಮರದ ಕಾಂಡವನ್ನು ಅರ್ಧ ಕಡಿಯುವಷ್ಟರಲ್ಲಿ ಅದರೊಳಗಿನ ಮತ್ತಷ್ಟು ಭಾಗ ಗರಗಸ ಸೇರಿದಂತೆ ಇತರೆ ಸಾಮಗ್ರಿಯಿಂದ ಕಡಿಯುವ ಸಂದರ್ಭ ವಸ್ತುಗಳೇ ಮುರಿದು ಹೋಗಿವೆ ಹೊರತು ಮರಕ್ಕೆ ಯಾವದೇ ರೀತಿ ಧಕ್ಕೆಯಾಗದೆ ಅರ್ಧಕ್ಕೆ ಕಾಂಡ ಮುರಿದಿದೆ.

ಅರಳಿ ಮರದ ಕಾಂಡದಲ್ಲಿ ಹನುಮನ ಚಿತ್ರ ಪ್ರತ್ಯಕ್ಷವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಪೂಜೆ, ಪುನಸ್ಕಾರದೊಂದಿಗೆ ಭಕ್ತಿ-ಭಾವ ಮೆರೆಯುವಲ್ಲಿ ಕಾರಣವಾಗುತ್ತಿದ್ದಂತೆ ಊರಿನ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಅಲ್ಲಿದ್ದ ಮರದಲ್ಲಿದ್ದ ಹನುಮನ ಮೂರ್ತಿ ಚಿತ್ರ ನೋಡಿ ಒಂದು ಕ್ಷಣ ವಿಚಲಿತರಾಗುವಲ್ಲಿ ಕಾರಣವಾಯಿತು.

ಈ ಕುರಿತಂತೆ ಮಾತನಾಡಿದ ಸ್ಥಳೀಯ ನಿವಾಸಿ ನಿವೃತ್ತ ಉಪನ್ಯಾಸಕ ಬಸವರಾಜ ಬುಟ್ಟನ್ನವರ, `ದೇವರಿದ್ದಾನೆ ಎಂಬುದಕ್ಕೆ ಮರದಲ್ಲಿನ ಹನುಮನ ಮೂರ್ತಿ ಚಿತ್ರವೇ ಸಾಕ್ಷಿ. ಅರಳಿಮರ ಕಡಿಯಬೇಕೆನ್ನುವಷ್ಟರಲ್ಲಿ ಅದರಲ್ಲಿನ ಚಿತ್ರ ಪ್ರತ್ಯಕ್ಷವಾಗಿ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.’ ಎಂದು ಹೇಳಿದ್ದಾರೆ.

Exit mobile version