Home ನಮ್ಮ ಜಿಲ್ಲೆ ಧಾರವಾಡ ಸಂಯುಕ್ತ ಕರ್ನಾಟಕ ಬಳಗಕ್ಕೆ ಆರು ಪ್ರಶಸ್ತಿ

ಸಂಯುಕ್ತ ಕರ್ನಾಟಕ ಬಳಗಕ್ಕೆ ಆರು ಪ್ರಶಸ್ತಿ

0

ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಕಚೇರಿಯ ಸ್ಥಾನಿಕ ಸಂಪಾದಕರಾದ ಷಣ್ಮುಖ ಕೋಳಿವಾಡ ಸೇರಿದಂತೆ ಸಂಕ ಬಳಗದ ಆರು ಜನ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಪ್ರಶಸ್ತಿ ಪ್ರದಾನ ಮಾಡಿದರು.
ಮಂಗಳೂರು ಜಿಲ್ಲಾ ವರದಿಗಾರ ಆರ್.‌ರಾಮಕೃಷ್ಣ, ಹಾವೇರಿ ಜಿಲ್ಲಾ ವರದಿಗಾರರಾದ ನಾಗರಾಜ ಕುರುವತ್ತೇರ, ಪ್ರಕಾಶ ಜೋಶಿ,ಶಿವಮೊಗ್ಗ ವರದಿಗಾರರಾದ ಹುಲಿಮನೆ ತಿಮ್ಮಪ್ಪ ಹಾಗೂ ಬೆಂಗಳೂರು ಕಚೇರಿಯ ಶ್ರೀನಿವಾಸಮೂರ್ತಿ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿಎಸ್ಸಾರ್ ಪ್ರಶಸ್ತಿ ಪಡೆದ ಹಿಂದಿನ ಸಹ ಸಂಪಾದಕರಾದ ದಿ. ಧ್ರುವರಾಜ ಮುತಾಲಿಕ ದೇಸಾಯಿ ಅವರ ಪರವಾಗಿ ಅವರ ಪುತ್ರ ಶ್ರೀರಂಗ ಪ್ರಶಸ್ತಿ ಸ್ವೀಕರಿಸಿದರು.

Exit mobile version