Home ತಾಜಾ ಸುದ್ದಿ ರಾಜ್ಯ ಹಾಳು ಮಾಡಿದ ಬಿಜೆಪಿ ತೊಲಗಿಸಿ: ಸಿದ್ದರಾಮಯ್ಯ

ರಾಜ್ಯ ಹಾಳು ಮಾಡಿದ ಬಿಜೆಪಿ ತೊಲಗಿಸಿ: ಸಿದ್ದರಾಮಯ್ಯ

0
ಸಿದ್ದರಾಮಯ್ಯ

ಧಾರವಾಡ(ಕಲಘಟಗಿ): ಬಿಜೆಪಿ ಸರಕಾರ ರಾಜ್ಯವನ್ನು ಹಾಳು ಮಾಡಿದೆ. ಅದು ಭ್ರಷ್ಟ, ಜನವಿರೋಧಿ ಸರಕಾರವಿದೆ. ರಾಜ್ಯದ ಜನರನ್ನೆಲ್ಲ ಸಾಲಗಾರರನ್ನಾಗಿ ಮಾಡಿದೆ. ಇಂತಹ ಸರಕಾರ ಯಾರಿಗೂ ಬೇಕಾಗಿಲ್ಲ. ಬರುವ ಚುನಾವಣೆಯಲ್ಲಿ ಈ ಸರಕಾರ ತೊಲಗಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನೆರೆದ ಜನಸ್ತೋಮಕ್ಕೆ ಕರೆ ನೀಡಿದರು.
ಬುಧವಾರ ತಡಸ ಕ್ರಾಸ್ ಬಳಿ ಪ್ರಜಾಧ್ವನಿ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಮಳೆ ಬಂದು ಸಮಾವೇಶ ರದ್ದಾದ ಬಳಿಕ ಸಿದ್ದರಾಮಯ್ಯ ಅವರು ಸಂತೋಷ ಲಾಡ್ ಅವರ ಮನೆಗೆ ತೆರಳಿದರು. ಅಲ್ಲಿಗೇ ಅವರ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ತೆರಳಿದ್ದರು. ನೆರೆದ ಜನಸ್ತೋಮವನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.
ರಾಜ್ಯದಲ್ಲಿ ಜನ ವಿರೋಧಿ, ಭ್ರಷ್ಟ ಸರಕಾರವಿದೆ. ರೈತರ, ಕಾರ್ಮಿಕರ, ಮಹಿಳೆಯರ, ಯುವಕರ ಸಮಸ್ಯೆಗಳು ಹೆಚ್ಚಾಗಿವೆ. ಬೆಲೆ ಏರಿಕೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಡವರು, ದಲಿತರು ಯಾರಿಗೂ ನೆಮ್ಮದಿ ಇಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು.

Exit mobile version