Home ನಮ್ಮ ಜಿಲ್ಲೆ ಮಹಿಳೆಯರ ಸಬಲೀಕರಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಕ್ರಿಶನ್ ಪಾಲ್ ಗುರ್ಜರ್

ಮಹಿಳೆಯರ ಸಬಲೀಕರಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಕ್ರಿಶನ್ ಪಾಲ್ ಗುರ್ಜರ್

0
KRISHAN PAL

ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಾತೃವಂದನಾ ಯೋಜನೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ಅವರು ತಿಳಿಸಿದರು.
ಅವರು ಇಂದು ಮದ್ದೂರಿನ ತಾಲ್ಲೂಕಿನ ಸರ್ಕಾರಿ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮೊದಲು ವ್ಯಕ್ತಿಗಳ ಹೆಸರಿನಲ್ಲಿ ಯೋಜನೆಗಳು ಪ್ರಾರಂಭವಾಗುತ್ತಿತು. ಇಂದು ಪ್ರಧಾನ ಮಂತ್ರಿಯ ಹೆಸರಿನಲ್ಲಿ ಯೋಜನೆ ಪ್ರಾರಂಭವಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಬಾರಿ ಗರ್ಭಿಣಿ ಯಾಗುವ ಮಹಿಳೆಯರಿಗೆ ಪೌಷ್ಠಿಕ ಆಹಾರ ಒದಗಿಸಲು ಮೂರು ಕಂತುಗಳಲ್ಲಿ 5000/- ರೂ ಸಹಾಯಧನ ನೀಡಲಾಗುತ್ತಿತ್ತು, ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಎರಡನೇ ಬಾರಿ ಗರ್ಭಿಣಿಯಾಗುವ ಮಹಿಳೆಗೂ ಮಾತೃ ವಂದನಾ‌ ಯೋಜನೆಯನ್ನು ವಿಸ್ತರಿಸಲು ಅಧಿಸೂಚನೆ ಹೊರಡಿಸಲಿದ್ದಾರೆ ಎಂದರು.

Exit mobile version